ಬುಧವಾರ, ಜನವರಿ 19, 2022
27 °C

ಏಷ್ಯನ್‌ ಟೀಮ್ ಸ್ಕ್ವಾಷ್ ಚಾಂಪಿಯನ್‌ಷಿಪ್‌: ಭಾರತ ತಂಡಗಳ ಶುಭಾರಂಭ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕ್ವಾಲಾಲಂಪುರ‌: ಅಗ್ರಶ್ರೇಯಾಂಕದ ಭಾರತ ಪುರುಷರ ತಂಡವು ಏಷ್ಯನ್‌ ಸ್ಕ್ವಾಷ್ ಚಾಂಪಿಯನ್‌ಷಿಪ್‌ನಲ್ಲಿ ಗೆಲುವಿನ ಆರಂಭ ಮಾಡಿದೆ. ಮೂರನೇ ಶ್ರೇಯಾಂಕದ ಮಹಿಳಾ ತಂಡವು ಮಂಗಳವಾರ ಮೊದಲ ತಡೆ ದಾಟಿತು.

ಸೌರವ್‌ ಘೋಷಾಲ್‌, ಮಹೇಶ್ ಮನಗಾಂವಕರ್‌ ಮತ್ತು ವೇಲವನ್ ಸೆಂಥಿಲ್ ಕುಮಾರ್ ಅವರಿದ್ದ ಭಾರತ ಪುರುಷರ ತಂಡವು 3–0ಯಿಂದ ಎಂಟನೇ ಶ್ರೇಯಾಂಕದ ಫಿಲಿಪ್ಪೀನ್ಸ್ ಎದುರು ಗೆದ್ದಿತು. ಇದಕ್ಕೂ ಮೊದಲು ತಂಡವು ಇರಾಕ್ ತಂಡವನ್ನೂ ಇಷ್ಟೇ ಅಂತರದಿಂದ ಸೋಲಿಸಿತ್ತು.

ಫಿಲಿಪ್ಪೀನ್ಸ್ ಎದುರಿನ ಪಂದ್ಯದಲ್ಲಿ ಭಾರತದ ಸೌರವ್ ಘೋಷಾಲ್‌ 11-8, 11-8, 11-4ರಿಂದ ರಾಬರ್ಟ್‌ ಗಾರ್ಸಿಯಾ ಎದುರು, ಮಹೇಶ್‌ 1-1, 11-6, 11-6ರಿಂದ ಡೇವಿಡ್‌ ಪೆಲಿನೊ ವಿರುದ್ಧ, ಸೆಂಥಿಲ್ ಕುಮಾರ್‌ 11-5, 11-7, 11-2ರಿಂದ ರೇಮಾರ್ಕ್‌ ಬೆಗೊರ್ನಿಯಾ ಮೇಲೆ ಗೆಲುವು ಸಾಧಿಸಿದರು.

ಭಾರತ ಮಹಿಳಾ ತಂಡವೂ ಫಿಲಿಪ್ಪೀನ್ಸ್ ಎದುರೇ ಗೆಲುವು ಸಾಧಿಸಿತು. ತಂಡದ ಜೋಷ್ನಾ ಚಿಣ್ಣಪ್ಪ 13-11, 11-8, 11-4ರಿಂದ ಜೆಮಿಸಾ ಅರಿಬಾಡೊ ಎದುರು, ಸುನೈನಾ ಕುರುವಿಲ್ಲಾ 11-4, 11-2, 11-2ರಿಂದ ಯೊನ್ನೆ ಅಲಿಸಾ ದಾಲಿದಾ ವಿರುದ್ಧ, ಊರ್ವಶಿ ಜೋಷಿ 11-2, 11-3, 11-2ರಿಂದ ಲಿಜೆಟ್ಟೆ ರೆಯೆಸ್‌ ವಿರುದ್ಧ ಗೆದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು