ಭಾನುವಾರ, ಜನವರಿ 19, 2020
22 °C

ಬ್ಯಾಡ್ಮಿಂಟನ್‌: ತಾನ್ಯಾ ಜೋಡಿಗೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕರ್ನಾಟಕದ ತಾನ್ಯಾ ಹೇಮಂತ್‌ ಅವರು ಉತ್ತರಾಖಂಡದ ಅದಿತಿ ಭಟ್‌ ಜೊತೆಗೂಡಿ ಯೊನೆಕ್ಸ್ ಸನ್‌ರೈಸ್‌ ಅಖಿಲ ಭಾರತ ಜೂನಿಯರ್‌ ರ‍್ಯಾಂಕಿಂಗ್‌ ಬ್ಯಾಡ್ಮಿಂಟನ್‌ ಟೂರ್ನಿಯ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದರು.

ಚಂಡೀಗಡದಲ್ಲಿ ನಡೆಯುತ್ತಿರುವ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಬುಧವಾರ ಈ ಜೋಡಿಯು ಉತ್ತರಪ್ರದೇಶದ ಶೈಲಜಾ ಶುಕ್ಲಾ–ಶ್ರುತಿ ಮಿಶ್ರಾ ಜೋಡಿಯನ್ನು 21–11, 21–19ರಿಂದ ಮಣಿಸಿತು.

ಸೆಮಿಫೈನಲ್‌ ಪಂದ್ಯದಲ್ಲಿ ತಾನ್ಯಾ ಹಾಗೂ ಅದಿತಿ ಅವರು ರಿಯಾ ಸಾಚನ್‌–ದೀಪ್‌ಶಿಖಾ ಸಿಂಗ್‌ ಎದುರು 21–10, 21–7ರಿಂದ ಗೆದ್ದಿದ್ದರು.

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು