ಬ್ಯಾಡ್ಮಿಂಟನ್‌: ಲಕ್ಷ್ಯ, ಅಶ್ಮಿತಾಗೆ ಪ್ರಶಸ್ತಿ

7

ಬ್ಯಾಡ್ಮಿಂಟನ್‌: ಲಕ್ಷ್ಯ, ಅಶ್ಮಿತಾಗೆ ಪ್ರಶಸ್ತಿ

Published:
Updated:

ಬೆಂಗಳೂರು: ಅನುಭವಿ ಆಟಗಾರ, ಉತ್ತರಾಖಂಡದ ಲಕ್ಷ್ಯ ಸೇನ್‌, ಇಲ್ಲಿ ಶನಿವಾರ ಮುಕ್ತಾಯಗೊಂಡ ರಾಷ್ಟ್ರೀಯ ರ‍್ಯಾಂಕಿಂಗ್‌ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಪುರುಷರ ವಿಭಾಗದ ಪ್ರಶಸ್ತಿ ಗಳಿಸಿದರು. ಪಡುಕೆರೆ–ದ್ರಾವಿಡ್‌ ಕ್ರೀಡಾ ಸಂಕೀರ್ಣದಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಅವರು ಮಧ್ಯಪ್ರದೇಶದ ಆಲಾಪ್ ಮಿಶ್ರಾ ಎದುರು 21–10, 21–16ರಿಂದ ಗೆದ್ದರು.

ಮಹಿಳೆಯರ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ ಅಸ್ಸಾಂನ ಅಶ್ಮಿತಾ ಚಾಲಿಹಾ ಅವರು ವಿಮಾನ ನಿಲ್ದಾಣ ಪ್ರಾಧಿಕಾರದ ಆಕರ್ಷಿ ಕಶ್ಯಪ್‌ ವಿರುದ್ಧ 21–14, 21–10ರಿಂದ ಗೆದ್ದರು.

‍ಪುರುಷರ ಡಬಲ್ಸ್ ವಿಭಾಗದ ಫೈನಲ್‌ನಲ್ಲಿ ಆಂಧ್ರಪ್ರದೇಶದ ಕೃಷ್ಣಪ್ರಸಾದ್‌ ಮತ್ತು ಏರ್ ಇಂಡಿಯಾದ ಧ್ರುವ ಕಪಿಲ ಜೋಡಿ ಪಿಇಟಿಯ ರೂಪೇಶ್ ಕುಮಾರ್‌ ಮತ್ತು ದಿಜು ಜೋಡಿಯನ್ನು 21–14, 21–9ರಿಂದ ಸೋಲಿಸಿತು. ಮಹಿಳೆಯರ ಡಬಲ್ಸ್ ವಿಭಾಗದ ಫೈನಲ್‌ನಲ್ಲಿ ಒಆರ್‌ಐನ ಋತುಪರ್ಣಾ ಮತ್ತು ಕೇರಳದ ಆರತಿ ಸಾರಾ ಜೋಡಿ ಆರ್‌ಬಿಐನ ಮೇಘನಾ ಜಂಕ್ಕಂಪುಡಿ–ಪೂರ್ವಿಶಾ ರಾಮ್ ಅವರನ್ನು 10–21, 21–17, 21–12ರಿಂದ ಮಣಿಸಿತು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !