ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಥಾಮಸ್ ಕಪ್ ಸಾಧನೆ: ಕೋಚ್‌ ವಿಮಲ್‌ಗೇಕಿಲ್ಲ ಬಹುಮಾನ?

Last Updated 18 ಮೇ 2022, 5:16 IST
ಅಕ್ಷರ ಗಾತ್ರ

ಬೆಂಗಳೂರು: ಥಾಮಸ್ ಕಪ್ ಗೆದ್ದು ಭಾರತ ತಂಡದ ಆಟಗಾರ ಲಕ್ಷ್ಯ ಸೇನ್ ಅವರಿಗೆ ₹5 ಲಕ್ಷ ಕೊಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೋಮವಾರ ಘೋಷಿಸಿದ್ದರು. ಮಂಗಳವಾರ ತಮ್ಮ ಮಾತನ್ನು ಈಡೇರಿಸಿಯೂಬಿಟ್ಟರು.

ಥಾಯ್ಲೆಂಡ್‌ನಿಂದ ಮರಳಿದ ಲಕ್ಷ್ಯ ಸೇನ್ ಅವರಿಗೆ ₹ 5 ಲಕ್ಷ ಚೆಕ್ ನೀಡಿ ಸನ್ಮಾನಿಸಿದರು. ಅವರೊಂದಿಗೆ ತಂಡದ ಕೋಚ್ ಮತ್ತು ಮ್ಯಾನೇಜರ್ ವಿಮಲ್ ಕುಮಾರ್ ಮತ್ತು ಲಕ್ಷ್ಯ ಅವರ ತಂದೆ, ತಾಯಿಯನ್ನು ಗೌರವಿಸಿದರು.

ಆದರೆ, ಅನುಭವಿ ಕೋಚ್ ವಿಮಲ್ ಅವರಿಗೆ ನಗದು ಬಹುಮಾನ ನೀಡದಿರುವುದು ಈಗ ಕ್ರೀಡಾವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಎರಡು ಬಾರಿ ಮಾಜಿ ರಾಷ್ಟ್ರೀಯ ಚಾಂಪಿಯನ್, ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತರಾಗಿರುವ ವಿಮಲ್ ಅವರು ಇದುವರೆಗೆ ಹಲವು ಪ್ರತಿಭಾವಂತರಿಗೆ ತರಬೇತಿ ನೀಡಿದ್ದಾರೆ. ಲಕ್ಷ್ಯ ಸೇನ್ ಗೂ ಅವರೇ ಮಾರ್ಗದರ್ಶನ ನೀಡಿದ್ದಾರೆ.

73 ವರ್ಷಗಳಲ್ಲಿ ಭಾರತವು ಇದೇ ಮೊದಲ ಸಲ ಥಾಮಸ್ ಕಪ್ ಜಯಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT