ಮಂಗಳವಾರ, 30 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲ್ ಬ್ಯಾಡ್ಮಿಂಟನ್ ಆಳ್ವಾಸ್‍ ಚಾಂಪಿಯನ್‌

ರಾಜ್ಯ ಸಬ್ ಜೂನಿಯರ್ ಬಾಲ್ ಬ್ಯಾಡ್ಮಿಂಟನ್
Last Updated 16 ಸೆಪ್ಟೆಂಬರ್ 2019, 20:15 IST
ಅಕ್ಷರ ಗಾತ್ರ

ಬೆಂಗಳೂರು: ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಬಾಲಕ ಮತ್ತು ಬಾಲಕಿಯರ ತಂಡಗಳು39ನೇ ರಾಜ್ಯ ಸಬ್ ಜೂನಿಯರ್ ಬಾಲ್ ಬ್ಯಾಡ್ಮಿಂಟನ್ ಲೀಗ್ ಚಾಂಪಿಯನ್‍ಶಿಪ್‍ನ ಚಾಂಪಿಯನ್ ಆಗಿ ಹೊರಹೊಮ್ಮಿವೆ.

ಕರ್ನಾಟಕ ಬಾಲ್‌ ಬ್ಯಾಡ್ಮಿಂಟನ್‌ ಸಂಸ್ಥೆ ಹಾಗೂ ಬೆಂಗಳೂರು ಜಿಲ್ಲಾ ಬಾಲ್ ಬ್ಯಾಡ್ಮಿಂಟನ್ ಸಂಸ್ಥೆಗಳ ಆಶ್ರಯದಲ್ಲಿ ಬೆಂಗಳೂರಿನ ರಾಜೇಶ್ವರಿ ವಿದ್ಯಾಶಾಲೆಯ ಆವರಣದಲ್ಲಿಟೂರ್ನಿ ನಡೆಯಿತು.

ಬಾಲಕರ ವಿಭಾಗದ ಫೈನಲ್‌ನಲ್ಲಿ ಆಳ್ವಾಸ್ ತಂಡ ಚಿಂತಾಮಣಿ ಬಿಬಿಸಿ ತಂಡವನ್ನು 35-33, 28-35, 35-33 ಸೆಟ್‌ಗಳಿಂದ ಮಣಿಸಿತು. ಸೆಮಿಫೈನಲ್‍ನಲ್ಲಿ ಆಳ್ವಾಸ್ ತಂಡ ಸ್ವರ್ಣಾಂಬ ತಂಡವನ್ನು, ಚಿಂತಾಮಣಿ ತಂಡ ಶ್ರೀ ರಾಜೇಶ್ವರಿ ಯೂತ್ ಕ್ಲಬ್ ತಂಡವನ್ನು ಸೋಲಿಸಿತ್ತು.

ಬಾಲಕಿಯರ ವಿಭಾಗದ ಫೈನಲ್‌ನಲ್ಲಿ ಆಳ್ವಾಸ್ ತಂಡ ಸ್ವರ್ಣಾಂಬ ಹೊನ್ನುಡಿಕೆ ತಂಡವನ್ನು 35-30, 35-21 ಸೆಟ್‍ಗಳಿಂದ ಸೋಲಿಸಿ ಪ್ರಶಸ್ತಿಯನ್ನು ಪಡೆದುಕೊಂಡಿತು. ಸೆಮಿಫೈನಲ್‍ನಲ್ಲಿ ಆಳ್ವಾಸ್ ತಂಡ ಮಾಕವಳ್ಳಿ ತಂಡವನ್ನು, ಸ್ವರ್ಣಾಂಬ ಹೊನ್ನುಡಿಕೆ ತಂಡ ಅರಕಲಗೂಡು ತಂಡವನ್ನು ಸೋಲಿಸಿತ್ತು.

ಚಿಂತಾಮಣಿ ತಂಡದ ಧೀರಜ್ ರೆಡ್ಡಿ ಹಾಗೂ ಆಳ್ವಾಸ್ ತಂಡದ ಪ್ರಿಯಾ.ಬಿ.ಜಿ. ಕ್ರಮವಾಗಿ ಅತ್ಯುತ್ತಮ ಆಟಗಾರ ಹಾಗೂ ಆಟಗಾರ್ತಿ ಪ್ರಶಸ್ತಿಗಳನ್ನು ಪಡೆದುಕೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT