ಬೆಂಗಳೂರು: ಉದ್ದೀಪನಾ ಮದ್ದು ಸೇವಿಸಿರುವುದು ಸಾಬೀತಾಗಿರುವ ಕಾರಣ ಭಾರತದ ಅಥ್ಲೀಟ್ ಗೋಮತಿ ಮಾರಿಮುತ್ತು ಮೇಲೆ ಅಥ್ಲೆಟಿಕ್ಸ್ ಇಂಟಿಗ್ರಿಟಿ ಯೂನಿಟ್ (ಎಐಯು) ಸೋಮವಾರ ನಾಲ್ಕು ವರ್ಷ ನಿಷೇಧ ಹೇರಿದೆ.

ತಮಿಳುನಾಡಿನ 31 ವರ್ಷ ವಯಸ್ಸಿನ ಗೋಮತಿ ಅವರಿಂದ ಮೂತ್ರದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಅದರಲ್ಲಿ ನಿಷೇಧಿತ ಮದ್ದಿನ ಅಂಶ ಪತ್ತೆಯಾಗಿತ್ತು.

ಹೋದ ವರ್ಷ ದೋಹಾದಲ್ಲಿ ನಡೆದಿದ್ದ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ 800 ಮೀಟರ್ಸ್ ಓಟದಲ್ಲಿ ಗೋಮತಿ ಚಿನ್ನದ ಪದಕ ಜಯಿಸಿದ್ದರು. ನಿಷೇಧದ ಕಾರಣ ಅವರಿಂದ ಪದಕ ಹಿಂಪಡೆಯುವ ಸಾಧ್ಯತೆ ಇದೆ.

2019ರ ಮೇ 17ರಿಂದಲೇ ನಿಷೇಧ ಶಿಕ್ಷೆ ಜಾರಿಯಾಗಿದ್ದು, 2023ರ ಮೇ 16ಕ್ಕೆ ಇದು ಅಂತ್ಯಗೊಳ್ಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.