ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಸ್ಕೆಟ್‌ಬಾಲ್: ಕೋರಮಂಗಲ ತಂಡಕ್ಕೆ ಜಯ

Last Updated 11 ಜೂನ್ 2019, 19:45 IST
ಅಕ್ಷರ ಗಾತ್ರ

ಬೆಂಗಳೂರು: ಕೋರಮಂಗಲ ಬ್ಯಾಸ್ಕೆಟ್‌ಬಾಲ್ ಕ್ಲಬ್‌ ತಂಡವು ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಾಜ್ಯ ಬಿ ಡಿವಿಷನ್ ಬ್ಯಾಸ್ಕೆಟ್‌ಬಾಲ್ ಲೀಗ್ ಚಾಂಪಿಯನ್‌ಷಿಪ್‌ ಪಂದ್ಯದಲ್ಲಿ ಗೆದ್ದಿತು.

ರವೀಶ್ (11) ಮತ್ತು ಅಭಿಷೇಕ್ ಜೈನ್ (15) ಅವರ ಉತ್ತಮ ಆಟದ ಬಲದಿಂದ ಕೋರಮಂಗಲ ತಂಡವು 70–63 ರಿಂದ ಎನ್‌ಜಿವಿ ವಿರುದ್ಧ ಜಯಿಸಿತು.

ಇನ್ನೊಂದು ಪಂದ್ಯದಲ್ಲಿ ಸಿಎಂಪಿ ತಂಡವು 62–47ರಿಂದ ಧಾರವಾಡದ ರೋವರ್ಸ್‌ ಬ್ಯಾಸ್ಕೆಟ್‌ಬಾಲ್ ಕ್ಲಬ್ ಎದುರು ಜಯಿಸಿತು. ಸಿಎಂಪಿ ತಂಡದ ಅರುಣಕುಮಾರ್ 21, ರಾಜೇಶ್ ಕುಮಾರ್ 14 ಪಾಯಿಂಟ್ಸ್‌ ಗಳಿಸಿದರು. ರೋವರ್ಸ್‌ ತಂಡದ ಸುನಿಲ್ (22) ಮತ್ತು ವಿವೇಕ್ (10) ಉತ್ತಮವಾಗಿ ಆಡಿದರು. ಇನ್ನೊಂದು ಪಂದ್ಯದಲ್ಲಿ ರಾಜಮಹಲ್ ಬ್ಯಾಸ್ಕೆಟ್‌ಬಾಲ್ ಕ್ಲಬ್ ತಂಡವು 76–59ರಿಂದ ಮೈಸೂರಿನ ಪ್ರೊ ಟಿಇಸಿ ಅಸೋಸಿಯೇಷನ್ ವಿರುದ್ಧ ಜಯಿಸಿತು.

ಕನಕ ಕೋಲಾರ್ ತಂಡವು 55 –45 ರಿಂದ ಹಲಸೂರು ಸ್ಪೋರ್ಟ್ಸ್‌ ಯೂನಿಯರ್ ವಿರುದ್ಧ ಗೆದ್ದಿತು. ಕನಕ ತಂಡದ ಗೌತಮ್ 27, ಹರ್ಷಿತಾ 14 ಅಂಕಗಳನ್ನು ಗಳಿಸಿದರು. ಹಲಸೂರು ತಂಡದ ಹರಿ 17 ಮತ್ತು ಬ್ರಿಜೇಂದ್ರ 10 ಪಾಯಿಂಟ್ಸ್‌ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT