ಬುಧವಾರ, ಏಪ್ರಿಲ್ 1, 2020
19 °C

ಟ್ರ್ಯಾಕ್ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌ ನಾಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜಿಲ್ಲಾ ಸೈಕ್ಲಿಂಗ್ ಸಂಸ್ಥೆ ಮತ್ತು ಶೇಷಾದ್ರಿಪುರ ಪಿಯು ಕಾಲೇಜು ಆಯೋಜಿಸಿರುವ ಜಿಲ್ಲಾ ಟ್ರ್ಯಾಕ್ ಸೈಕ್ಲಿಂಗ್ ಚಾಂಪಿಯನ್‌ಷಿಪ್‌ ಇದೇ ನಾಲ್ಕರಂದು ಬೆಳಿಗ್ಗೆ 6.30ರಿಂದ ಸೆಂಟ್ರಲ್ ಕಾಲೇಜು ಮೈದಾನದಲ್ಲಿ ನಡೆಯಲಿದೆ.

ಆರು ವಿಭಾಗಗಲ್ಲಿ ಬಾಲಕ/ಬಾಲಕಿಯರು ಮತ್ತು ಮುಕ್ತ ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿದ್ದು ಮೂರರಂದು ಸಂಜೆ ಮೂರು ಗಂಟೆಯಿಂದ ಆರು ಗಂಟೆಯ ವರೆಗೆ ಹೆಸರು ನೊಂದಾಯಿಸಿಕೊಳ್ಳಬಹುದು ಎಂದು ಸೈಕ್ಲಿಂಗ್ ಸಂಸ್ಥೆಯ ಕಾರ್ಯದರ್ಶಿ ಚಿಕ್ಕರಂಗಸ್ವಾಮಿ ತಿಳಿಸಿದ್ದಾರೆ.

14 ವರ್ಷದೊಳಗಿನ ಬಾಲಕ–ಬಾಲಕಿಯರಿಗೆ ವೈಯಕ್ತಿಕ ಟೈಮ್ ಟ್ರಯಲ್‌ ಮತ್ತು  ವೈಯಕ್ತಿಕ ಪರ್ಸ್ಯೂಟ್‌, 16 ವರ್ಷದೊಳಗಿನ ಬಾಲಕ–ಬಾಲಕಿಯರಿಗೆ ವೈಯಕ್ತಿಕ ಟೈಮ್ ಟ್ರಯಲ್‌, ವೈಯಕ್ತಿಕ ಪರ್ಸ್ಯೂಟ್‌, ಸ್ನ್ಯಾಚ್‌ ರೇಸ್ ಅಥವಾ ಮಾಸ್‌ ಸ್ಟಾರ್ಟ್‌ ರೇಸ್ ನಡೆಯಲಿದೆ. 18 ವರ್ಷದೊಳಗಿನ ಬಾಲಕ–ಬಾಲಕಿಯರು ಮತ್ತು ಎಲೀಟ್‌ ವಿಭಾಗದವರಿಗೆ ವೈಯಕ್ತಿಕ ಟೈಮ್ ಟ್ರಯಲ್‌, ವೈಯಕ್ತಿಕ ಪರ್ಸ್ಯೂಟ್‌, ಸ್ನ್ಯಾಚ್‌ ರೇಸ್ ಇರುತ್ತದೆ.

ವಿಶೇಷ ವಿಭಾಗದಲ್ಲಿ 11 ವರ್ಷದೊಳಗಿನ ಬಾಲಕ–ಬಾಲಕಿಯರಿಗೆ ಸ್ನ್ಯಾಚ್ ರೇಸ್‌ ಮತ್ತು ಮಾಸ್ ಸ್ಟಾರ್ಟ್‌, ಮುಕ್ತ ವಿಭಾಗದವರಿಗೆ ವೈಯಕ್ತಿಕ ಪರ್ಸ್ಯೂಟ್ ಮತ್ತು ಸ್ನ್ಯಾಚ್ ರೇಸ್ ಇರುತ್ತದೆ ಎಂದು ಅವರು ತಿಳಿಸಿದ್ದಾರೆ. ಮಾಹಿತಿಗೆ ಗುರುರಾಜ್‌ (9972777773) ಅಥವಾ ಚಿಕ್ಕರಂಗಸ್ವಾಮಿ (9844385510) ಅವರನ್ನು ಸಂಪರ್ಕಿಸಬಹುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು