ಪಿಬಿಎಲ್‌: ಹಂಟರ್ಸ್‌ಗೆ ಭರ್ಜರಿ ಜಯ

7
ಸೈನಾ ನೆಹ್ವಾಲ್‌ ವಿರುದ್ಧದ ಪಂದ್ಯದಲ್ಲಿ ಅಮೋಘ ಆಟವಾಡಿ ಗೆದ್ದ ಪಿ.ವಿ.ಸಿಂಧು

ಪಿಬಿಎಲ್‌: ಹಂಟರ್ಸ್‌ಗೆ ಭರ್ಜರಿ ಜಯ

Published:
Updated:
Prajavani

ಪುಣೆ : ಮೊದಲ ಪಂದ್ಯದಲ್ಲಿ ಸೋತರೂ ನಂತರ ಚೇತರಿಸಿಕೊಂಡ ಹೈದರಾಬಾದ್ ಹಂಟರ್ಸ್ ತಂಡ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್‌ನ (ಪಿಬಿಎಲ್‌) ಮಂಗಳವಾರದ ಹಣಾಹಣಿಯಲ್ಲಿ ಭರ್ಜರಿ ಜಯ ಗಳಿಸಿತು.

ಇಲ್ಲಿನ ಬಾಲೇವಾಡಿ ಕ್ರೀಡಾ ಸಂಕೀರ್ಣದಲ್ಲಿ ರಾತ್ರಿ ನಡೆದ ನಾರ್ತ್ ಈಸ್ಟರ್ನ್ ವಾರಿಯರ್ಸ್‌ ಎದುರಿನ ಹಣಾಹಣಿಯಲ್ಲಿ ಹಂಟರ್ಸ್‌ 5–0ಯಿಂದ ಗೆದ್ದಿತು. ಮೊದಲ ಪಂದ್ಯದಲ್ಲಿ ಕಿಮ್ ಹ ನ ಮತ್ತು ಲಿಯೊ ಮಿನ್ ಚುನ್‌ ಜೋಡಿ ಕಿಮ್ ಸಾ ರಂಗ್ ಮತ್ತು ಇಯಾಮ್ ಹೇ ವಾನ್ ವಿರುದ್ಧ 15–14, 15–8ರಿಂದ ಗೆದ್ದು ವಾರಿಯರ್ಸ್‌ಗೆ ಮುನ್ನಡೆ ಗಳಿಸಿಕೊಟ್ಟರು.

ಪುರುಷರ ಸಿಂಗಲ್ಸ್‌ನಲ್ಲಿ ಲೀ ಹುಯಾನ್‌ 10–15, 15–13, 15–9ರಿಂದ ತನೊನ್ಸಕ್ ತನ್ಸೊಬುನ್ಸುಕ್‌ ಅವರನ್ನು ಮಣಿಸಿದರು. ಇದು ಹಂಟರ್ಸ್‌ನ ಟ್ರಂಪ್ ಪಂದ್ಯ ಆಗಿದ್ದುದರಿಂದ ತಂಡ 2–1ರಿಂದ ಮುನ್ನಡೆಯಿತು.

ಸಿಂಧು–ನೆಹ್ವಾಲ್‌ ಹಣಾಹಣಿ: ನಂತರ, ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಕಣಕ್ಕೆ ಇಳಿದವರು ಪಿ.ವಿ.ಸಿಂಧು ಮತ್ತು ಸೈನಾ ನೆಹ್ವಾಲ್‌. ಪಂದ್ಯದಲ್ಲಿ ಸಿಂಧು 2–1ರಿಂದ ಗೆದ್ದು ಹಂಟರ್ಸ್‌ ಮುನ್ನಡೆಯನ್ನು ಹೆಚ್ಚಿಸಿದರು.

ಮೊದಲ ಗೇಮ್‌ನಲ್ಲಿ 11–15ರಿಂದ ಸೋತ ಸಿಂಧು ನಂತರ ಅಮೋಘ ಆಟದ ಮೂಲಕ ತಿರುಗೇಟು ನೀಡಿದರು. ಎರಡನೇ ಗೇಮ್‌ನಲ್ಲಿ 15–9ರಿಂದ ಗೆದ್ದ ಅವರು ನಿರ್ಣಾಯಕ ಮೂರನೇ ಗೇಮ್‌ನಲ್ಲಿ ಮತ್ತಷ್ಟು ಬಲ ಪಡೆದುಕೊಂಡರು. ಸೈನಾಗೆ ಕೇವಲ ಐದು ಪಾಯಿಂಟ್‌ಗಳನ್ನು ಬಿಟ್ಟುಕೊಟ್ಟು ಗೆಲುವಿನ ನಗೆ ಸೂಸಿದರು.

ಪುರುಷರ ಮತ್ತೊಂದು ಸಿಂಗಲ್ಸ್‌ ಪಂದ್ಯ ವಾರಿಯರ್ಸ್‌ಗೆ ಟ್ರಂಪ್ ಪಂದ್ಯ ಆಗಿತ್ತು. ಇದರಲ್ಲಿ ಹಂಟರ್ಸ್‌ನ ಮಾರ್ಕ್ ಕಲಿಜೊವ್‌ 15–11, 15–14ರಿಂದ ಟಿ.ಹವೊಯ್‌ ಎದುರು ಗೆದ್ದರು. ಕೊನೆಯ ಮಿಶ್ರ ಡಬಲ್ಸ್‌ನಲ್ಲಿ ಇಸಾರ ಮತ್ತು ರಂಗ್ ಜೋಡಿ ವಾರಿಯರ್ಸ್‌ನ ಸ್ಯಾಂಗ್ ಮತ್ತು ಚುನ್ ಎದುರು ಜಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !