ಭುವನೇಶ್ವರ (ಪಿಟಿಐ): ರಾಷ್ಟ್ರೀಯ ಫೆಡರೇಷನ್ ಕಪ್ ಸೀನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ ಮೂರನೇ ದಿನವಾದ ಮಂಗಳವಾರ ಮಹಿಳೆಯರ ಪೋಲ್ ವಾಲ್ಟ್ ಸ್ಪರ್ಧೆಯಲ್ಲಿ ರಾಷ್ಟ್ರೀಯ ದಾಖಲೆ ಹೊಂದಿರುವ ರೋಸಿ ಮೀನಾ ಪಾಲ್‌ರಾಜ್ 4.05 ಮೀಟರ್ ಎತ್ತರಕ್ಕೆ ಜಿಗಿದು ಚಿನ್ನ ಗೆದ್ದರು.
ತಮಿಳುನಾಡಿನ 26 ವರ್ಷದ ರೋಸಿ ಅವರ ಪ್ರಯತ್ನವು ಕಳೆದ ವರ್ಷ ಅವರು ಸ್ಥಾಪಿಸಿದ 4.21 ಮೀಟರ್ ರಾಷ್ಟ್ರೀಯ ದಾಖಲೆಗಿಂತ ಕಡಿಮೆಯಾಗಿದೆ.
ತಮಿಳುನಾಡಿನ ಬರಾನಿಕಾ ಇಳಂಗೋವನ್ 4 ಮೀಟರ್ ಜಿಗಿದು ಬೆಳ್ಳಿ ಗೆದ್ದರೆ, ಕೇರಳದ ಮರಿಯಾ ಜೈಸನ್ (3.90 ಮೀಟರ್) ಮೂರನೇ ಸ್ಥಾನ ಪಡೆದರು.
ಏಷ್ಯನ್ ಗೇಮ್ಸ್ ಕಂಚಿನ ಪದಕ ವಿಜೇತೆ ನಂದಿನಿ ಅಗಸರ ಏಳು ಸ್ಪರ್ಧೆಗಳ ಹೆಪ್ಟಾಥ್ಲಾನ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದರು.