ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್: ಪ್ರಧಾನ ಸುತ್ತಿಗೆ ಮೀರಾಬಾ

Published 14 ಮೇ 2024, 17:40 IST
Last Updated 14 ಮೇ 2024, 17:40 IST
ಅಕ್ಷರ ಗಾತ್ರ

ಬ್ಯಾಂಕಾಂಕ್ (ಪಿಟಿಐ); ಭಾರತದ ಮೈಸ್ನಮ್‌ ಮೀರಾಬಾ ಅವರು ಥಾಯ್ಲೆಂಡ್ ಓಪನ್ ಸೂಪರ್ 500 ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಪ್ರಧಾನ ಸುತ್ತಿಗೆ ಮುನ್ನಡೆದರು.

ಪ್ರಕಾಶ್ ಪಡುಕೋಣೆ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ ಮಣಿಪುರದ 21ರ ವರ್ಷದ ಮೀರಾಬಾ, ತಮ್ಮದೇ ದೇಶದ ಆಟಗಾರ ಶಾಶ್ವತ್ ದಲಾಲ್ ಅವರನ್ನು 15-21, 21-14, 21-16 ರಿಂದ ಸೋಲಿಸಿದರು. ನಂತರ ಮಲೇಷ್ಯಾದ ಕೊಕ್ ಜಿಂಗ್ ಹಾಂಗ್ ವಿರುದ್ಧ 21-19, 21-9 ಅಂತರದಲ್ಲಿ ಗೆದ್ದು ಪ್ರಧಾನ ಸುತ್ತು ಪ್ರವೇಶಿಸಿದರು.  

ಅವರು ಬುಧವಾರ  ಭಾರತದ ಅಗ್ರಮಾನ್ಯ ಆಟಗಾರ ಎಚ್‌.ಎಸ್‌. ಪ್ರಣಯ್‌ ಅವರನ್ನು ಎದುರಿಸಲಿದ್ದಾರೆ. 

ಪುರುಷರ ಸಿಂಗಲ್ಸ್ ಅರ್ಹತಾ ಸುತ್ತಿನಲ್ಲಿ ಎಸ್.ಶಂಕರ್ ಮುತ್ತುಸಾಮಿ, ಆಯುಷ್ ಶೆಟ್ಟಿ, ಕಾರ್ತಿಕೇಯ ಗುಲ್ಶನ್ ಕುಮಾರ್ ಮತ್ತು ರವಿ ಎಂಬ ನಾಲ್ವರು ಭಾರತೀಯರು ಇದ್ದರು. ಆದರೆ ವಿವಿಧ ಹಂತಗಳಲ್ಲಿ ಸೋತರು. 

ಮಹಿಳಾ ಸಿಂಗಲ್ಸ್ ಆಟಗಾರ್ತಿ ನಿಕ್ಕಿ ರಾಪ್ರಿಯಾ ಮತ್ತು ಪುರುಷರ ಡಬಲ್ಸ್ ಜೋಡಿ ವಿಮಲ್ರಾಜ್ ಅಣ್ಣಾದೊರೈ ಮತ್ತು ಮೌರ್ಯನ್‌  ಕಥಿರವನ್ ಕೂಡ ಅರ್ಹತಾ ಹಂತದಲ್ಲಿ ಸೋತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT