‘ಏಷ್ಯನ್‌ ಐಕಾನ್‌’ ಗೌರವಕ್ಕೆ ಭಾಜನರಾದ ಸುನಿಲ್‌ ಚೆಟ್ರಿ

7

‘ಏಷ್ಯನ್‌ ಐಕಾನ್‌’ ಗೌರವಕ್ಕೆ ಭಾಜನರಾದ ಸುನಿಲ್‌ ಚೆಟ್ರಿ

Published:
Updated:
Deccan Herald

ನವದೆಹಲಿ: ಭಾರತ ಫುಟ್‌ಬಾಲ್‌ ತಂಡದ ನಾಯಕ ಸುನಿಲ್‌ ಚೆಟ್ರಿ ಅವರು ಶುಕ್ರವಾರ ‘ಏಷ್ಯನ್‌ ಐಕಾನ್‌’ ಗೌರವಕ್ಕೆ ಭಾಜನರಾಗಿದ್ದಾರೆ. 

ಶುಕ್ರವಾರ 34ನೇ ಹುಟ್ಟುಹಬ್ಬ ಆಚರಿಸಿಕೊಂಡ ಸುನಿಲ್‌ ಚೆಟ್ರಿ ಅವರಿಗೆ ಏಷ್ಯನ್‌ ಫುಟ್‌ಬಾಲ್‌ ಫೆಡರೇಷನ್‌ (ಎಎಫ್‌ಸಿ) ಈ ಗೌರವ ನೀಡಿದೆ. ಇದೇ ವೇಳೆ ಅಂತರರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ ಹೆಚ್ಚು ಗೋಲು ಗಳಿಸಿದವರ ಪಟ್ಟಿಯಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಹಾಗೂ ಲಯೊನೆಲ್‌ ಮೆಸ್ಸಿ ಅವರ ನಂತರದ ಸ್ಥಾನದಲ್ಲಿರುವ ಚೆಟ್ರಿ ಅವರನ್ನು ಫೆಡರೇಷನ್‌ ಅಭಿನಂದಿಸಿದೆ. 

ಚೆಟ್ರಿ ಅವರು 101 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 64 ಗೋಲುಗಳನ್ನು ದಾಖಲಿಸಿದ್ದಾರೆ. ಸದ್ಯ, ಅವರು ಅತಿ ಹೆಚ್ಚು ಗೋಲು ಗಳಿಸಿದ ಏಷ್ಯಾದ ಫುಟ್‌ಬಾಲ್‌ ಆಟಗಾರ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.   

2005ರಿಂದ ಇಲ್ಲಿಯವರೆಗೂ ಈ ಆಟಗಾರ ಮಾಡಿದ ಸಾಧನೆ, ವೃತ್ತಿ ಜೀವನದ ಅವಿಸ್ಮರಣೀಯ ಘಟನೆಗಳನ್ನು ಎಎಫ್‌ಸಿ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಏಷ್ಯಾದ ಶ್ರೇಷ್ಠ ಫುಟ್‌ಬಾಲ್‌ ಆಟಗಾರ ಚೆಟ್ರಿ ಎಂದು ಅದು ಬಣ್ಣಿಸಿದೆ. 

‘ಭಾರತದಲ್ಲಿ ಕ್ರಿಕೆಟ್‌ ಅಪಾರ ಜನಮನ್ನಣೆ ಗಳಿಸಿದೆ. ಅಂತಹ ರಾಷ್ಟ್ರದಲ್ಲಿ ಸುನಿಲ್‌ ಅವರು ಫುಟ್‌ಬಾಲ್‌ನಲ್ಲಿ ತೋರಿರುವ ಸಾಧನೆಗೆ ನಿಜಕ್ಕೂ ಮಹತ್ವವಿದೆ’ ಎಂದು ಎಎಫ್‌ಸಿ ತಿಳಿಸಿದೆ.

‘ವಿಶ್ವ ಫುಟ್‌ಬಾಲ್‌ ರಂಗದ ದಿಗ್ಗಜರಾದ ಮೆಸ್ಸಿ, ರೊನಾಲ್ಡೊ ಅವರಂತವರು ಇನ್ನೂ ಆಡುತ್ತಿರುವ ಅವಧಿಯಲ್ಲಿ ಸುನಿಲ್‌ ತಮ್ಮ ಛಾಪು ಮೂಡಿಸಿದ್ದಾರೆ. ಇನ್ನೊಂದು ಗೋಲು ಗಳಿಸಿದರೆ ಮೆಸ್ಸಿ ಅವರ ದಾಖಲೆಯನ್ನು (65) ಸರಿಗಟ್ಟಲಿದ್ದಾರೆ ಈ ಆಟಗಾರ. ಹಾಗಾಗಿ, ಅವರಿಗೆ ಏಷ್ಯನ್‌ ಐಕಾನ್‌ ಎಂಬ ಗೌರವ  ನೀಡಲು ಹೆಮ್ಮೆಯಾಗುತ್ತಿದೆ’ ಎಂದು ಕೂಡ ಅದು ತಿಳಿಸಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !