ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ಸೋಷ್ಯಲ್ ಮೀಡಿಯಾ ಉಸ್ತುವಾರಿ ವಹಿಸಿರುವ ಶ್ರೀವತ್ಸ ಕೂಡಾ ಚುನಾವಣಾ ದಿನಾಂಕ ಘೋಷಣೆಗೆ ಮುನ್ನ ಟ್ವೀಟ್ ಮಾಡಿದ್ದರು!

Last Updated 27 ಮಾರ್ಚ್ 2018, 12:51 IST
ಅಕ್ಷರ ಗಾತ್ರ

ಬೆಂಗಳೂರು: ಮಂಗಳವಾರ ಬೆಳಗ್ಗೆ ಮುಖ್ಯ ಚುನಾವಣಾ ಆಯುಕ್ತ ಓಂ ಪ್ರಕಾಶ್ ರಾವತ್  ಕರ್ನಾಟಕ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆ ಮಾಡುವ ಮುನ್ನವೇ ಬಿಜೆಪಿ ಐಟಿ ಸೆಲ್‌ ಮುಖ್ಯಸ್ಥ ಅಮಿತ್‌ ಮಾಳವೀಯ ದಿನಾಂಕವನ್ನು ಟ್ವೀಟ್ ಮಾಡಿ ವಿವಾದಕ್ಕೀಡಾಗಿದ್ದಾರೆ.

ಆದರೆ ಮಾಳವೀಯ ಅವರು ಟ್ವೀಟ್ ಮಾಡಿದ ಅದೇ ಹೊತ್ತಿಗೆ ಕರ್ನಾಟಕ ಕಾಂಗ್ರೆಸ್ ಸೋಷ್ಯಲ್ ಮೀಡಿಯಾ ಉಸ್ತುವಾರಿ ವಹಿಸಿರುವ ಶ್ರೀವತ್ಸ ಕೂಡಾ ಇದೇ ರೀತಿಯ ಟ್ವೀಟ್ ಮಾಡಿದ್ದಾರೆ.

ಕರ್ನಾಟಕ ಚುನಾವಣೆ ಮೇ12 ರಂದು, ಫಲಿತಾಂಶ ಮೇ18 ಎಂದು  ಶ್ರೀವತ್ಸ ಅವರು ಬೆಳಗ್ಗೆ 11.08ಕ್ಕೆ ಟ್ವೀಟ್ ಮಾಡಿದ್ದಾರೆ.


ಮಾಳವೀಯ ಅವರ ಟ್ವೀಟ್ ಬಗ್ಗೆ ಟೀಕೆಗಳು ಕೇಳಿ ಬಂದ ಹಾಗೆ ಶ್ರೀವತ್ಸ ಅವರ ಟ್ವೀಟ್ ಬಗ್ಗೆಯೂ ನೆಟಿಜನ್‍ಗಳು ಪ್ರಶ್ನಿಸಿದ್ದಾರೆ,
ಮಾಳವೀಯ ಮತ್ತು ಶ್ರೀವತ್ಸ ಇವರಿಬ್ಬರೂ ಟೈಮ್ಸ್ ನೌ ಸುದ್ದಿ ವಾಹಿನಿ ನೋಡಿ ಟ್ವೀಟ್ ಮಾಡಿರಬಹುದು ಎಂಬುದು ಜನರ ಅಭಿಪ್ರಾಯ.


ಮಂಗಳವಾರ ಬೆಳಗ್ಗೆ 11 ಗಂಟೆಗೆ ಸುದ್ದಿಗೋಷ್ಠಿ ನಡೆಸಿದ ಮುಖ್ಯ ಚುನಾವಣಾ ಆಯುಕ್ತ ಓಂ ಪ್ರಕಾಶ್ ರಾವತ್  11. 24ರ ಹೊತ್ತಿಗೆ ದಿನಾಂಕ ಪ್ರಕಟಿಸಿದ್ದರು. ಆದರೆ ಟೈಮ್ಸ್ ನೌ ಸುದ್ದಿ ವಾಹಿನಿ 11.07ಕ್ಕೆ ಚುನಾವಣಾ ದಿನಾಂಕ ಪ್ರಕಟಿಸಿದ್ದು, ಚುನಾವಣಾ ದಿನಾಂಕ ಮಾಹಿತಿ ಸೋರಿಕೆ ಆಗಿದೆಯೇ? ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ.

ಅಮಿತ್ ಮಾಳವೀಯ ಸ್ಪಷ್ಟನೆ
ಟ್ವೀಟ್ ವಿವಾದದ ಬಗ್ಗೆ ಪ್ರತಿಕ್ರಿಯಿಸಿರುವ ಅಮಿತ್ ಮಾಳವೀಯ ತಾನು ಟೈಮ್ಸ್ ನೌ ಸುದ್ದಿ ವಾಹಿನಿ ನೋಡಿ ಟ್ವೀಟ್ ಮಾಡಿದ್ದೆ ಎಂದು ಟ್ವಿಟರ್‍‍ನಲ್ಲಿ ಸ್ಪಷ್ಟನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT