ಗುರುವಾರ , ನವೆಂಬರ್ 21, 2019
21 °C

ಕೇರಂ ಲೀಗ್‌: ಗೋಲ್ಡನ್‌ ನೈಟ್ಸ್‌ ತಂಡಕ್ಕೆ ಪ್ರಶಸ್ತಿ

Published:
Updated:

ಬೆಂಗಳೂರು: ತಮಿಳುನಾಡಿನ ಬಾಲಾಜಿ ನಾಯಕತ್ವದ ಗೋಲ್ಡನ್‌ ನೈಟ್ಸ್‌ ತಂಡ, ಭಾನುವಾರ ನಡೆದ ಮೊದಲ ಆರ್‌ಎಂಎಸ್‌ಸಿಎ ಪ್ರೀಮಿಯರ್‌ ಲೀಗ್‌ ದಕ್ಷಿಣ ಭಾರತ ಕೇರಂ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡಿತು.

ಗೋಲ್ಡನ್‌ ನೈಟ್ಸ್‌ ತಂಡ ಫೈನಲ್‌ನಲ್ಲಿ ಆ್ಯಬ್ಸಲ್ಯೂಟ್‌ ಡಾಮಿನೇಟರ್ಸ್‌ ತಂಡವನ್ನು  3–2 ರಿಂದ ಸೋಲಿಸಿತು. ಮೊದಲ ಸೆಮಿಫೈನಲ್‌ನಲ್ಲಿ ಗೋಲ್ಡನ್‌ ನೈಟ್ಸ್‌ 3–2 ರಿಂದ ಹೋಲಿ ಸ್ಟ್ರೈಕರ್ಸ್‌ ತಂಡವನ್ನು, ಎರಡನೇ ಸೆಮಿಫೈನಲ್‌ನಲ್ಲಿ ಡಾಮಿನೇಟರ್ಸ್‌ 3–2 ರಿಂಂದ ಕ್ರಾನಿಕ್‌ ಬಾಷರ್ಸ್‌ ತಂಡದನ್ನು ಸೋಲಿಸಿದ್ದವು. 

ಇದಕ್ಕೆ ಮೊದಲು ಗೋಲ್ಡನ್‌ ನೈಟ್ಸ್‌ ಎಂಟು ತಂಡಗಳ ಲೀಗ್‌ನಲ್ಲಿ 44 ಪಾಯಿಂಟ್ಸ್‌ ಸಂಗ್ರಹಿಸಿತು. ಕರ್ನಾಟಕದ ಮೋಹನ್‌ ಬಾಬು ನಾಯಕತ್ವದ ಆ್ಯಬ್ಸಲ್ಯೂಟ್‌ ಡಾಮಿನೇಟರ್ಸ್‌ ತಂಡ (42 ಅಂಕ) ಎರಡನೇ ಮತ್ತು ಕ್ರಾನಿಕ್‌ ಬ್ಯಾಷರ್ಸ್‌ (42) ಮೂರನೇ, ಹೋಲಿ ಸ್ಟ್ರೈಕರ್ಸ್‌ ತಂಡ (34) ನಾಲ್ಕನೇ ಸ್ಥಾನ ಪಡೆದಿದ್ದವು.

ಆರ್‌ಎಂ.ಶಂಕರ್‌ ಕೇರಂ ಅಕಾಡೆಮಿಯು, ಬನ್ನೇರುಘಟ್ಟ ರಸ್ತೆಯ ‘ಕ್ಲಬ್‌ ಡಿ ಕೇರಂ’ನಲ್ಲಿ ಟೂರ್ನಿ ಆಯೋಜಿಸಿತ್ತು.

ಪ್ರತಿಕ್ರಿಯಿಸಿ (+)