ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡಿಯಾ ಓಪನ್‌ಗೆ ಯೂಫಿ, ಆಕ್ಸೆಲ್ಸನ್‌

Last Updated 26 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ನವದೆಹಲಿ: ವಿಶ್ವದ ಅಗ್ರಮಾನ್ಯ ಆಟಗಾರ್ತಿ ಚೆನ್‌ ಯುಫೀ ಮತ್ತು ಪುರುಷರ ವಿಭಾಗದ ಹಾಲಿ ಚಾಂಪಿಯನ್‌ ವಿಕ್ಟರ್‌ ಆಕ್ಸೆಲ್ಸನ್‌ ಸೇರಿದಂತೆ ಖ್ಯಾತನಾಮರು, ಮಾರ್ಚ್‌ 24 ರಂದು ಇಲ್ಲಿ ಆರಂಭವಾಗುವ ಇಂಡಿಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯ ಆಕರ್ಷಣೆಯಾಗಲಿದ್ದಾರೆ. ಇದು ಟೂರ್ನಿಯ 10ನೇ ಆವೃತ್ತಿಯಾಗಿದೆ.

ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಏಪ್ರಿಲ್‌ 26ರ ಗಡುವು ಇರುವುದರಿಂದ ಈ ಟೂರ್ನಿಗೆ ಹೆಚ್ಚಿನ ಮಹತ್ವ ಇದೆ. ಟೂರ್ನಿಯ ಬಹುಮಾನದ ಮೊತ್ತ₹ 2.84 ಕೋಟಿ.

ಮಹಿಳೆಯರ ವಿಭಾಗದಲ್ಲಿ ವಿಶ್ವದ ‘ಟಾಪ್‌ ಟೆನ್‌’ ಆಟಗಾರ್ತಿಯರಲ್ಲಿ ಎಂಟು ಮಂದಿ, ಪುರುಷರ ವಿಭಾಗದಲ್ಲಿ ಆಗ್ರ ಹತ್ತರಲ್ಲಿ ಮೂವರು ನವದೆಹಲಿಯ ಟೂರ್ನಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಕೊರೊನಾ ವೈರಸ್‌ ಹಾವಳಿಯ ಮಧ್ಯೆಯೂ ಈ ಟೂರ್ನಿಯಲ್ಲಿ ಚೀನಾದ ಆಟಗಾರ್ತಿಯರೂ ಭಾಗವಹಿಸಲಿದ್ದಾರೆ. ಬಿಡಬ್ಲ್ಯುಎಫ್‌ ಟೂರ್ನಿಗಳಲ್ಲಿ ಆಡಲು ಆಟಗಾರ್ತಿಯರಿಗೆ ಅನುಮತಿ ನೀಡಲಾಗಿದೆ.

ಯೂಫಿ ಜೊತೆ ವಿಶ್ವದ ಎಂಟನೇ ಕ್ರಮಾಂಕದ ಎ ಬಿಂಗ್‌ಜಿಯಾವೊ, ಆಲ್‌ ಇಂಗ್ಲೆಂಡ್‌ ಟೂರ್ನಿಯ ಮಾಜಿ ಚಾಂಪಿಯನ್‌ ಶಿ ಯುಕಿ ಕೂಡ ಕಣಕ್ಕಿಳಿಯುವ ನಿರೀಕ್ಷೆಯಿದೆ. ಹಾಲಿ ವಿಶ್ವ ಚಾಂಪಿಯನ್‌ ಭಾರತದ ಪುಸರ್ಲ ಸಿಂಧು, ಮಾಜಿ ಅಗ್ರಮಾನ್ಯ ಆಟಗಾರ್ತಿ ಸೈನಾ ನೆಹ್ವಾಲ್‌ ಕೂಡ ಭಾಗವಹಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT