ಚೆಸ್‌: ಬಾಲಕಿಷನ್, ವಿವೇಕಾನಂದ ಮುನ್ನಡೆ

7

ಚೆಸ್‌: ಬಾಲಕಿಷನ್, ವಿವೇಕಾನಂದ ಮುನ್ನಡೆ

Published:
Updated:

ಕಲಬುರ್ಗಿ: ಬೆಂಗಳೂರಿನ ಎ.ಬಾಲಕಿಷನ್ ಮತ್ತು ಮೈಸೂರಿನ ಎಲ್.ವಿವೇಕಾನಂದ ಕಲಬುರ್ಗಿಯ ಎಸ್ಆರ್‌ಎನ್ ಮೆಹತಾ ಶಾಲೆಯಲ್ಲಿ ಗುಲಬರ್ಗಾ ಜಿಲ್ಲಾ ಚೆಸ್‌ ಅಸೋಸಿಯೇಷನ್ ಮತ್ತು ಪ್ರಮೋದ್ ಚೆಸ್ ಅಕಾಡೆಮಿ ವತಿಯಿಂದ ಆಯೋಜಿಸಿರುವ 25 ವರ್ಷದೊಳಗಿನವರ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ಮುನ್ನಡೆ ಸಾಧಿಸಿದ್ದಾರೆ.

ಶುಕ್ರವಾರ ಮೂರನೇ ಸುತ್ತಿನ ಅಂತ್ಯಕ್ಕೆ ಬಾಲಕಿಷನ್ ಮತ್ತು ವಿವೇಕಾನಂದ ತಲಾ ಮೂರು ಪಾಯಿಂಟ್ಸ್ ಗಳಿಸಿದರು.

2,040 ಇಂಟರ್‌ನ್ಯಾಷನಲ್ ರೇಟಿಂಗ್ಸ್ ಹೊಂದಿರುವ ಬಾಲಕಿಷನ್ ಮೂರು ಸುತ್ತುಗಳಲ್ಲಿ ಕ್ರಮವಾಗಿ ಕಲಬುರ್ಗಿಯ ಎಂ.ಕೆ.ಮಯಾಂಕ್, ಅನನ್ಯಾ ಶಾಕಿ ಮತ್ತು ನಮನ್‌ ಸೇಥಿಯಾ ವಿರುದ್ಧ ಜಯಗಳಿಸಿದರು.

ವಿವೇಕಾನಂದ ಮೂರು ಸುತ್ತುಗಳಲ್ಲಿ ಹುಬ್ಬಳ್ಳಿಯ ಅರ್ಚನಾ ಎಸ್.ಇಂದ್ರಾಳಿ, ಕಲಬುರ್ಗಿಯ ನಕುಲ್ ಲೋಯಾ, ದಾವಣಗೆರೆಯ ಪಿ.ಟಿ.ಬಸವನಗೌಡ ಅವರನ್ನು ಸೋಲಿಸಿದರು.

ಶಿರಸಿಯ ನಿತೀಶ್ ಭಟ್, ಶಿವಮೊಗ್ಗದ ಎಸ್.ಎಂ.ಅಜಯ್, ದಕ್ಷಿಣ ಕನ್ನಡದ ಚಿರಾಗ್ ಮುದ್ರಾಜೆ, ಧಾರವಾಡದ ಶ್ರೀಯಾ ಆರ್‌.ರೇವಣಕರ್, ಬೆಂಗಳೂರಿನ ಬಿ.ಎಂ.ಸುಜಯ್‌, ಆರ್‌.ಪಾರ್ಥಸಾರಥಿ, ಕಲಬುರ್ಗಿಯ ವಿ.ಎಸ್.ಪ್ರಜ್ವಲ್ ತಲಾ ಮೂರು ಪಾಯಿಂಟ್ಸ್ ಗಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !