ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುದೀರ್‌ಮನ್‌ ಕಪ್‌: ಫೈನಲ್‌ಗೆ ಚೀನಾ

Last Updated 25 ಮೇ 2019, 17:33 IST
ಅಕ್ಷರ ಗಾತ್ರ

ನ್ಯಾನಿಂಗ್‌: ಆತಿಥೇಯ ಚೀನಾ ತಂಡ 11ನೇ ಸುದೀರ್‌ಮನ್‌ ಕಪ್‌ ಬ್ಯಾಡ್ಮಿಂಟನ್‌ ಪ್ರಶಸ್ತಿ ಹೊಸ್ತಿಲಿಗೆ ಬಂದು ನಿಂತಿದೆ. ಶನಿವಾರ ಮಿಶ್ರ ತಂಡ ವಿಭಾಗದಲ್ಲಿ ಥಾಯ್ಲೆಂಡ್‌ ತಂಡವನ್ನು ಚೀನಾ ದಯನೀಯವಾಗಿ ಸೋಲಿಸಿತು. ರವಿವಾರ ಫೈನಲ್‌ ಪಂದ್ಯ ನಡೆಯಲಿದೆ.

ಥಾಯ್ಲೆಂಡ್ ತಂಡವನ್ನು 3–0 ಅಂಕಗಳ ಅಂತರದಿಂದ ಮಣಿಸಿದ ಚೀನಾ, ರವಿವಾರ ಅಂತಿಮ ಪಂದ್ಯದಲ್ಲಿ ಅಗ್ರ ಶ್ರೇಯಾಂಕದ ಜಪಾನ್‌ ತಂಡವನ್ನು ಎದುರಿಸಲಿದೆ.

ವಿಶ್ವ ಕ್ರಮಾಂಕದಲ್ಲಿ ಮೊದಲ ಸ್ಥಾನದಲ್ಲಿರುವ ಚೀನಾದ ಮಿಶ್ರ ಡಬಲ್ಸ್‌ ಜೋಡಿ ಜೆಂಗ್‌ ಸಿವೆಯಿ ಹಾಗೂ ಹುವಾಂಗ್ ಯಾಕಿಯೊಂಗ್‌ ಮತ್ತು ಪುರುಷರ ಸಿಂಗಲ್ಸ್‌ನಲ್ಲಿ ಶಿ ಯುಕಿ ಥಾಯ್ಲೆಂಡ್‌ ಸ್ಪರ್ಧಿಗಳ ವಿರುದ್ಧ ಜಯದ ನಗೆ ಬೀರಿದರು. ಪುರುಷರ ಡಬಲ್ಸ್‌ನಲ್ಲಿಯೂ ವಿಶ್ವ ಚಾಂಪಿಯನ್‌ ಚೀನಾದ ಜೋಡಿ ಲೀ ಜುನಹುಯ್‌ ಹಾಗೂ ಲಿವ್‌ ಯುಚೆನ್‌ ಪಾರಮ್ಯ ಮೆರೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT