ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

5 ಆಟಗಳಿಗೆ ಗ್ರಾಮೀಣ ಕ್ರೀಡೆ ಮಾನ್ಯತೆ: ಬೊಮ್ಮಾಯಿ

‘ನಮೋ ಕಿಸಾನ್‌ ಕಪ್‌’ಗೆ ಚಾಲನೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ
Last Updated 1 ಅಕ್ಟೋಬರ್ 2022, 19:37 IST
ಅಕ್ಷರ ಗಾತ್ರ

ಬೆಂಗಳೂರು: ‘ಐದು ಆಟಗಳನ್ನು ಅಧಿಕೃತವಾಗಿ ಗ್ರಾಮೀಣ ಕ್ರೀಡೆಗಳೆಂದು ಗುರುತಿಸಲಾಗಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಬಿಜೆಪಿ ಉತ್ತರ ಜಿಲ್ಲೆಯ ಕಿಸಾನ್‌ ಮೋರ್ಚಾದಿಂದ ಮಲ್ಲೇಶ್ವರದ ಚಂದ್ರಶೇಖರ್‌ ಆಜಾದ್‌ ಆಟ ಮೈದಾನದಲ್ಲಿ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರ 72ನೇ ಜನ್ಮದಿನಾಚರಣೆ ಅಂಗವಾಗಿ ಆಯೋಜಿಸಿದ್ದ ‘ನಮೋ ಕಿಸಾನ್‌ ಕಪ್‌’ಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಕಬಡ್ಡಿ, ಕೊಕ್ಕೊ, ಕುಸ್ತಿ, ಕಂಬಳ ಹಾಗೂ ಎತ್ತಿನಗಾಡಿ ಓಟದ ಸ್ಪರ್ಧೆಗಳನ್ನು ಗ್ರಾಮೀಣ ಕ್ರೀಡೆಗಳ ಪಟ್ಟಿಗೆ ಸೇರಿಸಲಾಗಿದೆ. ಈ ಕ್ರೀಡೆಗಳಿಗೆ ಉತ್ತೇಜನ ನೀಡಲು ಜಿಲ್ಲಾ, ತಾಲ್ಲೂಕು, ಗ್ರಾಮ ಪಂಚಾಯಿತಿಯಿಂದ ಅನುದಾನ ಸಹ ನೀಡಲಾಗುವುದು’ ಎಂದರು.

ಪುರುಷರ ವಿಭಾಗದ ಮೊದಲ ಕಬಡ್ಡಿ ಪಂದ್ಯದಲ್ಲಿ ಬ್ಯಾಟರಾಯನಪುರ ವಿರುದ್ಧ ಮಲ್ಲೇಶ್ವರ ತಂಡವು ಗೆಲುವು ಸಾಧಿಸಿತು. ಮಹಿಳಾ ವಿಭಾಗದಲ್ಲಿ ಕೆ.ಆರ್‌.ಪುರಂ ವಿರುದ್ಧ ಯಶವಂತಪುರ ತಂಡವು ಜಯಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT