ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮನ್‌ವೆಲ್ತ್‌ ಕ್ರೀಡಾಕೂಟ: ಟಿಟಿ ತಂಡದಲ್ಲಿ ಮತ್ತೆ ವಿವಾದ

Last Updated 1 ಆಗಸ್ಟ್ 2022, 20:30 IST
ಅಕ್ಷರ ಗಾತ್ರ

ಬರ್ಮಿಂಗ್‌ಹ್ಯಾಮ್‌: ಭಾರತ ಟೇಬಲ್ ಟೆನಿಸ್‌ ತಂಡದ ವಿವಾದ ಈಗ ಕಾಮನ್‌ವೆಲ್ತ್‌ ಕ್ರೀಡಾಕೂಟದ ಅಂಗಳಕ್ಕೂ ಕಾಲಿಟ್ಟಿದೆ.

ಕೂಟದ ಹಾಲಿ ಚಾಂಪಿಯನ್ ಆಗಿ ಇಲ್ಲಿಗೆ ಬಂದಿದ್ದ ಭಾರತ ಮಹಿಳಾ ತಂಡವು ಕ್ವಾರ್ಟರ್‌ಫೈನಲ್‌ನಲ್ಲಿ ತನಗಿಂತ ದುರ್ಬಲ ಮಲೇಷ್ಯಾ ತಂಡದ ಎದುರು ಆಘಾತ ಅನುಭವಿಸಿತ್ತು.

ತಂಡದ ಕೋಚ್ ಆಗಿ ನಿಯೋಜನೆಗೊಂಡಿದ್ದ ಅನಿಂದಿತಾ ಚಕ್ರವರ್ತಿ ಅವರು ಈ ಪಂದ್ಯದ ವೇಳೆ ಹಾಜರಿರಲಿಲ್ಲ. ಅವರ ಬದಲಾಗಿ ಪುರುಷರ ತಂಡದ ಕೋಚ್‌ ಎಸ್‌.ರಮಣ್‌ ಉಪಸ್ಥಿತರಿದ್ದದ್ದು ವಿವಾದಕ್ಕೆ ಕಾರಣವಾಗಿದೆ.

‘ಈ ಪ್ರಸಂಗ ನಡೆಯಬಾರದಿತ್ತು. ಮಹಿಳಾ ಕೋಚ್‌ ತಂಡಕ್ಕೆ ಮಾರ್ಗದರ್ಶನ ನೀಡಬೇಕಿತ್ತು. ಈ ಕುರಿತು ನಾನು ತಂಡದೊಂದಿಗೆ ಚರ್ಚಿಸುವೆ‘ ಎಂದು ಭಾರತ ಟೇಬಲ್ ಟೆನಿಸ್‌ ಫೆಡರೇಷನ್‌ಅನ್ನು (ಟಿಟಿಎಫ್‌ಐ) ಮುನ್ನಡೆಸುತ್ತಿರುವ ಆಡಳಿತಗಾರರ ಸಮಿತಿ ಸದಸ್ಯ ಎಸ್‌.ಡಿ. ಮುದ್ಗಿಲ್ ಹೇಳಿದ್ದಾರೆ.

ಮುದ್ಗಿಲ್ ಅವರು ಮ್ಯಾನೇಜರ್ ಆಗಿ ತಂಡದೊಂದಿಗೆ ಇರಬೇಕಿತ್ತು. ಆದರೆ ಆಟಗಾರರ ಮನವಿಯ ಮೇರೆಗೆ, ಫಿಸಿಯೊ ಗಾಯತ್ರಿ ವರ್ತಕ್ ಅವರಿಗೆ ಅವಕಾಶ ಮಾಡಿಕೊಟ್ಟು ಅವರು ಭಾರತದಲ್ಲೇ
ಉಳಿದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT