ಗುರುವಾರ , ಫೆಬ್ರವರಿ 25, 2021
20 °C

ಅಕ್ಟೋಬರ್‌ 4ರಿಂದ ಭಾರತ–ವಿಂಡೀಸ್‌ ಕ್ರಿಕೆಟ್‌ ಸರಣಿ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತ ಮತ್ತು ವೆಸ್ಟ್‌ ಇಂಡೀಸ್‌ ನಡುವಣ ಟೆಸ್ಟ್‌, ಏಕದಿನ ಮತ್ತು ಟ್ವೆಂಟಿ–20 ಕ್ರಿಕೆಟ್‌ ಸರಣಿಗಳು ಅಕ್ಟೋಬರ್‌ 4ರಿಂದ ನಡೆಯಲಿವೆ.

ಟೆಸ್ಟ್‌ ಸರಣಿಯ ಮೊದಲ ಪಂದ್ಯ ರಾಜ್‌ಕೋಟ್‌ನಲ್ಲಿ (ಅಕ್ಟೋಬರ್‌ 4 ರಿಂದ 8) ನಡೆಯಲಿದೆ. ಎರಡನೇ ಪಂದ್ಯವು ಅಕ್ಟೋಬರ್‌ 12ರಿಂದ 16 ರವರೆಗೆ ಹೈದರಾಬಾದ್‌ನಲ್ಲಿ ಆಯೋಜನೆಯಾಗಿದೆ.

ಏಕದಿನ ಸರಣಿಯ ಪಂದ್ಯಗಳು ಕ್ರಮವಾಗಿ ಗುವಾಹಟಿ (ಅ.21), ಇಂದೋರ್‌ (ಅ. 24),ಪುಣೆ (ಅ. 27), ಮುಂಬೈ (ಅ. 29) ಮತ್ತು ತಿರುವನಂತಪುರಂ (ನವೆಂಬರ್‌ 1) ನಲ್ಲಿ ನಡೆಯಲಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.