ಬುಧವಾರ, ಫೆಬ್ರವರಿ 19, 2020
16 °C

ಸೈಕ್ಲಿಂಗ್‌: ಕರ್ನಾಟಕಕ್ಕೆ ಒಲಿದ ಐದು ಪದಕಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಕರ್ನಾಟಕದ ಸೈಕ್ಲಿಸ್ಟ್‌ಗಳು ಬುಧವಾರ ರಾಜಸ್ಥಾನದ ಜೈಪುರದಲ್ಲಿ ಆರಂಭವಾದ 71ನೇ ರಾಷ್ಟ್ರೀಯ ಸೀನಿಯರ್‌ ಹಾಗೂ ಜೂನಿಯರ್‌ ಟ್ರ್ಯಾಕ್‌ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಐದು ಪದಕಗಳನ್ನು ಜಯಿಸಿದ್ದಾರೆ.

ಬಾಲಕಿಯರ 14 ವರ್ಷದ ಒಳಗಿನವರ 500 ಮೀ. ಟೈಮ್‌ ಟ್ರಯಲ್ಸ್‌ನಲ್ಲಿ ವಿಜಯಪುರದ ಅಂಕಿತಾ ರಾಠೋಡ 42.237 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿ ಬೆಳ್ಳಿ ಪದಕ ಪಡೆದರು.

16 ವರ್ಷದ ಒಳಗಿನವರ ವಿಭಾಗದ ನಾಲ್ಕು ಕಿ.ಮೀ. ಸ್ಕ್ರ್ಯಾಚ್ ರೇಸ್‌ ಸ್ಪರ್ಧೆಯಲ್ಲಿ ಬೆಂಗಳೂರಿನ ಕೀರ್ತಿ ರಂಗಸ್ವಾಮಿ ಬೆಳ್ಳಿ ಗೆದ್ದರು. 18 ವರ್ಷದ ಒಳಗಿನವರ ಆರು ಕಿ.ಮೀ. ಸ್ಕ್ರ್ಯಾಚ್ ರೇಸ್‌ ಸ್ಪರ್ಧೆಯಲ್ಲಿ ವಿಜಯಪುರದ ಸರ್ಕಾರಿ ಸೈಕ್ಲಿಂಗ್‌ ಕ್ರೀಡಾ ನಿಲಯದ ಸಹನಾ ಕುಡಿಗಾನೂರ ಬೆಳ್ಳಿ ಪಡೆದರು.

ಬಾಲಕರ 16 ವರ್ಷದ ಒಳಗಿನವರ ವಿಭಾಗದ ಐದು ಕಿ.ಮೀ. ಸ್ಕ್ರ್ಯಾಚ್ ರೇಸ್‌ ಸ್ಪರ್ಧೆಯಲ್ಲಿ ಗದಗ ಜಿಲ್ಲೆಯನ್ನು ಪ್ರತಿನಿಧಿಸಿರುವ ವಿಜಯಪುರದ ಗಣೇಶ ಕುಡಿಗನೂರ ಕಂಚು ಜಯಿಸಿದರು.

14 ವರ್ಷದ ಒಳಗಿನವರ ವಿಭಾಗದ 500 ಮೀ. ಟೈಮ್‌ ಟ್ರಯಲ್ಸ್‌ನಲ್ಲಿ ವಿಜಯಪುರ‌ ಸರ್ಕಾರಿ ಸೈಕ್ಲಿಂಗ್ ಕ್ರೀಡಾ ನಿಲಯದ ಮಲ್ಲಿಕಾರ್ಜುನ ಯಾದವಾಡ 39.192 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಕಂಚಿನ ಪದಕಕ್ಕೆ ಕೊರಳೊಡ್ಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು