ಭಾನುವಾರ, ಜೂನ್ 26, 2022
21 °C

ಕುಸ್ತಿ: ಪೋಲೆಂಡ್‌ ಓಪನ್‌ನಿಂದ ಹಿಂದೆ ಸರಿದ ದೀಪಕ್ ಪೂನಿಯಾ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾರ್ಸಾ, ಪೋಲೆಂಡ್‌ : ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿರುವ ಭಾರತದ ದೀಪಕ್ ಪೂನಿಯಾ ಅವರು ಎಡಗೈ ಗಾಯದ ಕಾರಣ ಪೋಲೆಂಡ್ ಓಪನ್ ಕುಸ್ತಿ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.

86 ಕೆಜಿ ವಿಭಾಗದಲ್ಲಿ ಸ್ಪರ್ಧಿಸುವ ದೀಪಕ್‌, ವಾರ್ಸಾಗೆ ತೆರಳುವ ಮೂರು ದಿನಗಳ ಮೊದಲು ಅಭ್ಯಾಸದ ಸಂದರ್ಭದಲ್ಲಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

‘ಗಾಯ ಉಲ್ಬಣವಾಗುವುದಕ್ಕೆ ಅವರು ಬಯಸುವುದಿಲ್ಲ. ಸ್ಪರ್ಧಿಸುವ ಕುರಿತು ವಾರ್ಸಾ ತಲುಪಿದ ಬಳಿಕ ತಿಳಿಸುವುದಾಗಿ ಫೆಡರೇಷನ್‌ಗೆ ಮಾಹಿತಿ ನೀಡಿದ್ದರು. ಗಾಯದ ತೀವ್ರತೆಯ ಕಾರಣ, ಟೂರ್ನಿಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಇಂದು ಬೆಳಿಗ್ಗೆ ಹೇಳಿದ್ದಾರೆ‘ ಎಂದು ಭಾರತ ಕುಸ್ತಿ ತಂಡದ ಶಿಬಿರದ ಮೂಲಗಳು ಹೇಳಿವೆ.

ಭಾರತ ಕುಸ್ತಿ ಫೆಡರೇಷನ್‌ (ಡಬ್ಲ್ಯುಎಫ್‌ಐ) ಕೂಡ ಈ ಬೆಳವಣಿಗೆಯನ್ನು ದೃಢಪಡಿಸಿದೆ.

‘ನಾವು ಅವರಿಗೆ ಆಯ್ಕೆ ನೀಡಿದ್ದೇವೆ. ಒಲಿಂಪಿಕ್ಸ್‌ಗೆ ಕೆಲವೇ ದಿನಗಳು ಬಾಕಿ ಇರುವಾಗ ಕುಸ್ತಿಪಟುಗಳ ಮೇಲೆ ಒತ್ತಡ ಹೇರಲು ಬಯಸುವುದಿಲ್ಲ. ಅಪಾಯ ಮೇಲೆದುಕೊಳ್ಳುವ ಪ್ರಶ್ನೆ ಇಲ್ಲ‘ ಎಂದು ಡಬ್ಲ್ಯುಎಫ್‌ಐ ಸಹಾಯಕ ಕಾರ್ಯದರ್ಶಿ ವಿನೋದ್ ತೋಮರ್ ಹೇಳಿದ್ದಾರೆ.

ಪೋಲೆಂಡ್‌ ಫೆಡರೇಶನ್ ಆಯೋಜಿಸಿರುವ ತರಬೇತಿ ಶಿಬಿರಕ್ಕಾಗಿ ಪೂನಿಯಾ ಜುಲೈ 5ರವರೆಗೆ ತಂಡದೊಂದಿಗೆ ಉಳಿಯಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು