‘ಮುಂದಿನ ವಾರದಿಂದ ದೀಪಾ ಅಭ್ಯಾಸ’

7

‘ಮುಂದಿನ ವಾರದಿಂದ ದೀಪಾ ಅಭ್ಯಾಸ’

Published:
Updated:
Deccan Herald

ನವದೆಹಲಿ: ಭಾರತದ ಜಿಮ್ನಾಸ್ಟಿಕ್‌ ಪಟು ದೀಪಾ ಕರ್ಮಾಕರ್‌ ಅವರು ಮುಂಬರುವ ವಿಶ್ವ ಚಾಂಪಿಯನ್‌ಷಿಪ್‌ಗಾಗಿ ಮುಂದಿನ ವಾರದಿಂದ ಮತ್ತೆ ಅಭ್ಯಾಸ ಆರಂಭಿಸಲಿದ್ದಾರೆ ಎಂದು ಅವರ ಕೋಚ್‌ ಬಿಸ್ವೇಶ್ವರ್‌ ನಂದಿ ಹೇಳಿದ್ದಾರೆ. 

ಅಭ್ಯಾಸ ನಡೆಸುವ ವೇಳೆ ಮಂಡಿ ನೋವಿಗೊಳಗಾದ ಕಾರಣ ದೀಪಾ ಅವರು ಏಷ್ಯನ್‌ ಕ್ರೀಡಾಕೂಟದ ಆರ್ಟಿಸ್ಟಿಕ್‌ ತಂಡದ ವಿಭಾಗದ ಫೈನಲ್ಸ್‌ನಿಂದ ಹೊರಗುಳಿದಿದ್ದರು. 

‘ಮಂಡಿಯಲ್ಲಿ ಅಗಾಧ ನೋವು ಕಾಣಿಸಿಕೊಂಡಿತ್ತು. ಭಾರತಕ್ಕೆ ಮರಳಿದ ನಂತರ ಎಂಆರ್‌ಐ ಸ್ಕ್ಯಾನ್‌ ಮಾಡಿಸಲಾಯಿತು. ಯಾವುದೇ ಗಂಭೀರ ಸಮಸ್ಯೆಗಳಿಲ್ಲ ಎಂಬ ವರದಿ ಬಂದಿದೆ. ಅವರು ಈಗ ವಿಶ್ರಾಂತಿ ಪಡೆಯುತ್ತಿದ್ದಾರೆ’ ಎಂದು ಬಿಸ್ವೇಶ್ವರ್‌ ತಿಳಿಸಿದ್ದಾರೆ. 

ಅಕ್ಟೋಬರ್‌ 25ರಿಂದ ನವೆಂಬರ್‌ ಐದರವರೆಗೆ ದೋಹಾದಲ್ಲಿ ವಿಶ್ವ ಚಾಂಪಿಯನ್‌ಷಿಪ್‌ ನಡೆಯಲಿದೆ. 

2016ರ ಒಲಿಂಪಿಕ್‌ ಕ್ರೀಡಾಕೂಟದಲ್ಲಿ ದೀಪಾ ಅವರು ನಾಲ್ಕನೇ ಸ್ಥಾನ ಪಡೆದಿದ್ದರು. ಆದರೆ, ಮಂಡಿ ನೋವಿನಿಂದಾಗಿ ಎರಡು ವರ್ಷಗಳ ಕಾಲ ಯಾವುದೇ ಕ್ರೀಡಾಕೂಟದಲ್ಲಿ ಸ್ಪರ್ಧಿಸಿರಲಿಲ್ಲ. ಇತ್ತೀಚೆಗೆ ಟರ್ಕಿಯಲ್ಲಿ ನಡೆದ ವಿಶ್ವ ಚಾಲೆಂಜ್‌ ಕಪ್‌ನಲ್ಲಿ ಅವರು ಚಿನ್ನದ ಸಾಧನೆ ಮಾಡಿದ್ದರು.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !