ಭಾನುವಾರ, ಅಕ್ಟೋಬರ್ 2, 2022
20 °C

ಎಐಟಿಎ 16 ವರ್ಷದೊಳಗಿನವರ ಟೆನಿಸ್ ಟೂರ್ನಿ: ಸೆಮಿಫೈನಲ್‌ಗೆ ಆರಾಧ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಎರಡನೇ ಶ್ರೇಯಾಂಕದ ಲುಕ್ಷಿತಾ ಗೋಪಿನಾಥ್ ಅವರಿಗೆ ಆಘಾತ ನೀಡಿದ ಕರ್ನಾಟಕದ ದಿಶಾ ಸಂತೋಷ್‌ ಖಂಡೋಜಿ ಎಐಟಿಎ ಸೂಪರ್‌ ಸಿರೀಸ್‌ 16 ವರ್ಷದೊಳಗಿನವರ ಟೆನಿಸ್‌ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟರು.

ಕೆಎಸ್‌ಎಲ್‌ಟಿಎ ಅಂಗಣದಲ್ಲಿ ನಡೆಯುತ್ತಿರುವ ಟೂರ್ನಿಯ ಬಾಲಕಿಯರ ವಿಭಾಗದ ಎಂಟರಘಟ್ಟದ ಪಂದ್ಯದಲ್ಲಿ ಬುಧವಾರ ದಿಶಾ 7-5, 6-1ರಿಂದ ತಮಿಳುನಾಡಿನ ಆಟಗಾರ್ತಿಗೆ ಸೋಲುಣಿಸಿದರು.

ಅರ್ಹತಾ ಸುತ್ತಿನಲ್ಲಿ ಗೆದ್ದುಬಂದಿರುವ 14 ವರ್ಷದ ದಿಶಾ ಸೆಮಿಫೈನಲ್‌ನಲ್ಲಿ ವಿ. ಚಿಂಗಟಗೆರೆ ನವೀನ ಅವರನ್ನು ಎದುರಿಸಲಿದ್ದಾರೆ. ಕ್ವಾರ್ಟರ್‌ಫೈನಲ್‌ನ ಮತ್ತೊಂದು ಸೆಣಸಾಟದಲ್ಲಿ ನವೀನ 6-1, 6-1ರಿಂದ ಇಂದುಶಾ ನಿಮಕಾಯಲ ಎದುರು ಗೆದ್ದರು.

ಇನ್ನುಳಿದ ಪಂದ್ಯಗಳಲ್ಲಿ ಅಗ್ರಶ್ರೇಯಾಂಕದ ಹರ್ಷಿಣಿ ಎನ್‌. 6-2, 6-3ರಿಂದ ಅನ್ವಿ ಪುನಗಂಟಿ ಎದುರು, ಸವಿತಾ ಭುವನೇಶ್ವರನ್‌ 6-0, 6-3ರಿಂದ ಸಾನ್ವಿ ಮಿಶ್ರಾ ವಿರುದ್ಧ ಜಯ ಸಾಧಿಸಿ ನಾಲ್ಕರ ಘಟ್ಟ ತಲುಪಿದರು.

ಬಾಲಕರ ವಿಭಾಗದ ಕ್ವಾರ್ಟರ್‌ಫೈನಲ್ ಪಂದ್ಯಗಳಲ್ಲಿ ಆರಾಧ್ಯ ಕ್ಷಿತಿಜ್‌ 6-1, 6-3ರಿಂದ ರೂರಿಕ್ ರಜಿನಿ ಎದುರು, ಕ್ರಿಸ್ಟೊ ಬಾಬು 6-2, 6-4ರಿಂದ ಅನಂತ್‌ಕೃಷ್ಣ ವಿರುದ್ಧ, ಯಶ್ ಪಂಚಾಕ್ಷರಿ 2-6, 4-6, 6-1ರಿಂದ ಅನುರಾಗ್ ಶೌರ್ಯ ಕಳ್ಳಂಬೆಳ್ಳ ಎದುರು, ಶ್ರೀನಿಕೇತ್‌ ಕಣ್ಣನ್‌ 6-3, 7-6 (7)ರಿಂದ ಪ್ರಕಾಶ್ ಸರಣ್‌ ಎದುರು ಗೆಲುವು ಸಾಧಿಸಿದರು.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು