ಜೆದ್ದಾ, ಸೌದಿ ಅರೇಬಿಯಾ: ಭಾರತದ ಜೆಹಾನ್ ದಾರುವಾಲಾ ಅವರು ಫಾರ್ಮುಲಾ 2 ಚಾಂಪಿಯನ್‌ಷಿಪ್ ಸೌದಿ ಅರೇಬಿಯಾ ಸುತ್ತಿನಲ್ಲಿ ಎರಡನೇ ಬಾರಿ ‘ಪೋಡಿಯಂ ಫಿನಿಷ್’ ಮಾಡಿದ್ದಾರೆ.

ಭಾನುವಾರ ಇಲ್ಲಿ ನಡೆದ ಫೀಚರ್ ರೇಸ್‌ನಲ್ಲಿ ಡಚ್ ಮೂಲದ ಎಂಪಿ ಮೋಟರ್‌ಸ್ಪೋರ್ಟ್ ತಂಡ ಪ‍್ರತಿನಿಧಿಸಿದ್ದ ಜೆಹಾನ್ ಮೂರನೇ ಸ್ಥಾನ ಗಳಿಸಿದರು. ಅವರು 50 ನಿಮಿಷ 53.133 ಸೆಕೆಂಡುಗಳಲ್ಲಿ ಗುರಿ ತಲುಪಿದರು. ಇದರೊಂದಿಗೆ ಈ ವಾರಾಂತ್ಯದ ಎರಡೂ ರೇಸ್‌ಗಳಲ್ಲಿ ಅಗ್ರ 3ರಲ್ಲಿ ಸ್ಥಾನ ಪಡೆದ ಮೊದಲ ಸ್ಪರ್ಧಿ ಎನಿಸಿಕೊಂಡರು.

ಫೀಚರ್ ರೇಸ್‌ನಲ್ಲಿ ಡೆನ್ಮಾರ್ಕ್‌ನ ಫ್ರೆಡರಿಕ್ ವೆಸ್ಟಿ (ಪ್ರೆಮಾ ರೇಸಿಂಗ್ ತಂಡ, ಕಾಲ: 50 ನಿ. 45.587 ಸೆ.) ಅಗ್ರಸ್ಥಾನ ಗಳಿಸಿದರೆ, ಆಸ್ಟ್ರೇಲಿಯಾದ ಜಾಕ್ ಡೂಹಾನ್ (ವಿರ್ಟೊಸಿ ರೇಸಿಂಗ್, ಕಾಲ: 50ನಿ. 49.546 ಸೆ.) ಅವರು ಎರಡನೇ ಸ್ಥಾನವನ್ನು ತಮ್ಮದಾಗಿಸಿಕೊಂಡರು.

ಶನಿವಾರ ನಡೆದ ಸ್ಪ್ರಿಂಟ್ ರೇಸ್‌ನಲ್ಲೂ ಜೆಹಾನ್ ಮೂರನೇ ಸ್ಥಾನ ಪಡೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.