ಸೋಮವಾರ, ಜೂನ್ 21, 2021
23 °C

ಕೋಚ್‌ಗೆ ವಿಸಾ: ಭಾರತ ಶೂಟಿಂಗ್ ತಂಡ ನಿರಾಳ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಭಾರತ ಶೂಟಿಂಗ್ ತಂಡದ ವಿದೇಶಿ ಕೋಚ್ ಪವೆಲ್ ಸ್ಮಿರ್ನೋವ್ ಅವರ ವಿಸಾಗೆ ಇದ್ದ ಅಡ್ಡಿ ನಿವಾರಣೆಯಾಗಿದ್ದು ಕ್ರೊವೇಷಿಯಾದಲ್ಲಿರುವ ತಂಡವನ್ನು ಶುಕ್ರವಾರ ಸೇರಿಕೊಳ್ಳಲಿದ್ದಾರೆ. ಸಮರೇಶ್ ಜಂಗ್ ಮತ್ತು ರೋನಕ್ ಪಂಡಿತ್ ತಿಂಗಳಾಂತ್ಯದಲ್ಲಿ ಸ್ಮಿರ್ನೋವ್‌ಗೆ ನೆರವಾಗಲಿದ್ದಾರೆ.

ವಿಸಾ ಲಭಿಸಲು ತಡವಾದ ಕಾರಣ ತಂಡದೊಂದಿಗೆ ಸ್ಮಿರ್ನೋವ್ ಕಳೆದ ವಾರ ತೆರಳಿರಲಿಲ್ಲ. ಈಗ ಸಮಸ್ಯೆ ಬಗೆಹರಿದಿದೆ ಎಂದು ರಾಷ್ಟ್ರೀಯ ರೈಫಲ್ ಸಂಸ್ಥೆಯ ಕಾರ್ಯದರ್ಶಿ ರಾಜೀವ್ ಭಾಟಿಯಾ ತಿಳಿಸಿದ್ದಾರೆ.

2012ರ ಲಂಡನ್ ಒಲಿಂಪಿಕ್ಸ್‌ನ 25 ಮೀಟರ್ಸ್ ರ‍್ಯಾಪಿಡ್ ಫೈರ್ ಪಿಸ್ತೂಲ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿದ್ದ ವಿಜಯಕುಮಾರ್ ಅವರಿಗೆ ಸ್ಮಿರ್ನೋವ್ ತರಬೇತಿ ನೀಡಿದ್ದರು. ನಂತರ ಅವರನ್ನು ರಾಷ್ಟ್ರೀಯ ಪಿಸ್ತೂಲು ತಂಡದ ಕೋಚ್ ಆಗಿ ನೇಮಕ ಮಾಡಲಾಗಿತ್ತು.

ಭಾರತ ತಂಡ ಸದ್ಯ ಕ್ರೊವೇಷಿಯಾ ರಾಜಧಾನಿಯಲ್ಲಿದ್ದು ಗುರುವಾರ ಆರಂಭವಾಗಲಿರುವ ಯುರೋಪಿಯನ್ ಚಾಂಪಿಯನ್‌ಷಿಪ್‌ನಲ್ಲಿ ಅತಿಥಿ ಶೂಟರ್‌ಗಳಾಗಿ ಪಾಲ್ಗೊಳ್ಳುವರು. ನಂತರ ಜೂನ್ 22ರಿಂದ ನಡೆಯಲಿರುವ ಐಎಸ್‌ಎಸ್‌ಎಫ್‌ ವಿಶ್ವಕಪ್‌ನಲ್ಲಿ ಭಾಗವಹಿಸುವರು. ಅಲ್ಲಿಂದ ನೇರವಾಗಿ ಟೋಕಿಯೊಗೆ ಪಯಣಿಸಲಿದ್ದಾರೆ.

ಪಿಸ್ತೂಲ್ ತಂಡದಲ್ಲಿ ಮನು ಭಾಕರ್‌, ಸೌರಭ್ ಚೌಧರಿ, ಅಭಿಷೇಕ್ ವರ್ಮಾ, ಯಶಸ್ವಿನಿ ಸಿಂಗ್ ದೇಸ್ವಾಲ ಮತ್ತು ರಾಹಿ ಸರ್ನೊಬತ್ ಇದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು