7

ನಾಲ್ಕರ ಘಟ್ಟಕ್ಕೆ ಭಾರತದ ನಾಲ್ಕು ಬಾಕ್ಸರ್‌ಗಳು

Published:
Updated:

ನವದೆಹಲಿ: ಭಾರತದ ನಾಲ್ಕು ಬಾಕ್ಸರ್‌ಗಳು ಮಂಗೋಲಿಯಾದಲ್ಲಿ ನಡೆಯುತ್ತಿರುವ ಉಲಾನ್‌ ಬಾತರ್‌ ಬಾಕ್ಸಿಂಗ್‌ ಟೂರ್ನಿಯಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದಾರೆ. 

ಸೋನಿಯಾ ಲಾಥರ್‌ (57 ಕೆ. ಜಿ. ವಿಭಾಗ), ಲವ್ಲಿನಾ ಬೊರ್ಗೊಹೇನ್‌ (69 ಕೆ. ಜಿ. ವಿಭಾಗ), ಹಿಮಾಂಶು ಶರ್ಮಾ (49 ಕೆ. ಜಿ. ವಿಭಾಗ) ಹಾಗೂ ಆಶಿಶ್‌ (64 ಕೆ. ಜಿ. ವಿಭಾಗ) ಅವರು ನಾಲ್ಕರ ಹಂತಕ್ಕೆ ತಲುಪಿದ ಬಾಕ್ಸರ್‌ಗಳು. 

ಮಹಿಳೆಯರ 51 ಕೆ. ಜಿ. ವಿಭಾಗದಲ್ಲಿ ಸರ್ಜುಬಾಲಾ ದೇವಿ ಅವರು ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಸೋತರು. ಮಂಗೋಲಿಯಾದ ಮ್ಯಾಗ್ಮರ್ದುಲಂ ನಂದಿನ್‌ಸೆಟ್ಸೆಗ್ ಅವರು ಸರ್ಜುಬಾಲಾ ಅವರನ್ನು 4–1ರಿಂದ ಮಣಿಸಿದರು. 

ಸ್ಥಳೀಯ ಮ್ಯಾಗ್ಮಾರ್‌ ಗುಂಡೆಗ್ಮಾ ಅವರನ್ನು ಸೋನಿಯಾ ಅವರು ಪರಾಭವಗೊಳಿಸಿದರು. ಇಂಡಿಯಾ ಓಪನ್‌ನಲ್ಲಿ ಚಿನ್ನ ಗೆದ್ದಿದ್ದ ಲವ್ಲಿನಾ ಅವರು ಥಾಯ್ಲೆಂಡ್‌ನ ಸುಚದಾ ಪಾನಿಚ್‌ ಅವರನ್ನು 5–0ಯಿಂದ ಸೋಲಿಸಿದರು. 

ಪುರುಷರ 49 ಕೆ. ಜಿ. ವಿಭಾಗದಲ್ಲಿ ಹಿಮಾಂಶು ಅವರು ಚೀನಾ ತೈಪೆಯ ಪೊ ವಿ ತು ಅವರ ವಿರುದ್ಧ ಗೆದ್ದರು. ಆಶಿಶ್‌ ಅವರು ಕೊರಿಯಾದ ಕಿಮ್‌ ಸಾಂಗ್‌ ಯುನ್‌ ವಿರುದ್ಧ 5–0ಯಿಂದ ಜಯಿಸಿದರು. 

ಭಾರತದ ಶಿವ ಥಾಪ, ಮಂದೀಪ್‌ ಜಾಂಗ್ರಾ, ಸಲ್ಮಾನ್‌ ಶೇಖ್‌ ಹಾಗೂ ಎತಾಶ್‌ ಖಾನ್‌ ಅವರ ಕ್ವಾರ್ಟರ್‌ ಫೈನಲ್‌ ಪಂದ್ಯಗಳು ಶುಕ್ರವಾರ ನಡೆಯಲಿವೆ. 

 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !