ಪ್ರೊ ಕಬಡ್ಡಿ ಲೀಗ್‌ ಹರಾಜು ಪ್ರಕ್ರಿಯೆಗೆ ತೆರೆ: ಬುಲ್ಸ್ ಪಾಲಾದ ಮಹಿಂದರ್‌

ಶುಕ್ರವಾರ, ಏಪ್ರಿಲ್ 26, 2019
35 °C
ಎರಡು ದಿನಗಳ ಕಾಲ ನಡೆದ ಖರೀದಿ

ಪ್ರೊ ಕಬಡ್ಡಿ ಲೀಗ್‌ ಹರಾಜು ಪ್ರಕ್ರಿಯೆಗೆ ತೆರೆ: ಬುಲ್ಸ್ ಪಾಲಾದ ಮಹಿಂದರ್‌

Published:
Updated:
Prajavani

ಮುಂಬೈ: ದೇಶಿ ಆಟಗಾರರ ‘ಬಿ’ ವಿಭಾಗದಲ್ಲಿ ಡಿಫೆಂಡರ್‌ ಮಹಿಂದರ್‌ ಸಿಂಗ್‌ ಹಾಗೂ ರೈಡರ್‌ ಮಂಜಿತ್‌ ಸಿಂಗ್‌ ದೊಡ್ಡ ಮೊತ್ತಕ್ಕೆ ಹರಾಜಾಗಿದ್ದಾರೆ.  ಈ ಮೂಲಕ ಪ್ರೊ ಕಬಡ್ಡಿ ಲೀಗ್‌ನ (ಪಿಕೆಎಲ್‌) ಏಳನೇ ಆವೃತ್ತಿಯ ಹರಾಜು ಪ್ರಕ್ರಿಯೆ ಮಂಗಳವಾರ ಮುಕ್ತಾಯಗೊಂಡಿದೆ.

ಬೆಂಗಳೂರು ಬುಲ್ಸ್‌ ತಂಡವು ಮಹಿಂದರ್‌  ಅವರನ್ನು ₹80 ಲಕ್ಷಕ್ಕೆ ಖರೀದಿಸಿದರೆ, ಮಂಜಿತ್‌ ಅವರನ್ನು ₹63 ಲಕ್ಷಕ್ಕೆ ಪುಣೇರಿ ಪಲ್ಟನ್‌ ತಂಡ ಖರೀದಿಸಿತು. ಆಲ್‌ರೌಂಡರ್‌ ಸಂದೀಪ್‌ ನರ್ವಾಲ್‌ ಅವರಿಗೆ ಯು ಮುಂಬಾ ತಂಡವು ₹89 ಲಕ್ಷ ನೀಡಿ ತನ್ನತ್ತ ಸೆಳೆದುಕೊಂಡಿತು. 

ಎರಡು ದಿನಗಳ ಕಾಲ ನಡೆದ ಹರಾಜಿನಲ್ಲಿ ದೇಶಿ ಹಾಗೂ ವಿದೇಶದ 200 ಆಟಗಾರರನ್ನು ಖರೀದಿಸಲು 12 ಫ್ರಾಂಚೈಸ್‌ಗಳು ₹50 ಕೋಟಿ ಖರ್ಚು ಮಾಡಿವೆ.

‘ಎ’ ವಿಭಾಗದಲ್ಲಿ ರೈಡರ್‌ ಸಿದ್ಧಾರ್ಥ್‌ ದೇಸಾಯಿ (₹1.45 ಕೋಟಿ)  ನಿತಿನ್‌ ತೋಮರ್‌ (₹1.20 ಕೋಟಿ) ಹರಾಜಾಗುವ ಮೂಲಕ ಗರಿಷ್ಠ ಮೌಲ್ಯ ಪಡೆದ ಆಟಗಾರರರೆನಿಸಿದ್ದರು. ತೆಲುಗು ಟೈಟನ್ಸ್‌ ಹಾಗೂ ಪುಣೇರಿ ಪಲ್ಟನ್‌ ತಂಡಗಳು ಕ್ರಮವಾಗಿ ಇವರನ್ನು ಸೋಮವಾರ ಖರೀದಿಸಿದ್ದವು.

ಇರಾನ್‌ ದೇಶದ ಮೊಹಮ್ಮದ್‌ ಇಸ್ಮಾಯಿಲ್‌ ನಬಿಬಕ್ಸ್‌ ಅವರು ₹77.75 ಲಕ್ಷ ಪಡೆಯುವ ಮೂಲಕ ಗರಿಷ್ಠ ಮೊತ್ತಕ್ಕೆ ಖರೀದಿಯಾದ ವಿದೇಶಿ ಆಟಗಾರ ಎಂಬ ಶ್ರೇಯ ತಮ್ಮದಾಗಿಸಿಕೊಂಡರು. ಪಿಕೆಎಲ್‌ ಏಳನೇ ಆವೃತ್ತಿಯ ಪಂದ್ಯಗಳು ಜುಲೈ 19ರಿಂದ ಅಕ್ಟೋಬರ್‌ 9ರವರೆಗೆ ನಡೆಯಲಿವೆ.

ಬರಹ ಇಷ್ಟವಾಯಿತೆ?

  • 1

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !