ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮರಕಲೆಗೆ ಮೊರೆ ಹೋದ ರಶೀದ್ ಖಾನ್

Last Updated 9 ಏಪ್ರಿಲ್ 2020, 19:35 IST
ಅಕ್ಷರ ಗಾತ್ರ

ನವದೆಹಲಿ: ಟೋಕಿಯೊ ಒಲಿಂಪಿಕ್ಸ್ ಅರ್ಹತೆಯ ಕನಸು ಕಾಣುತ್ತಿರುವ, ಎರಡು ಬಾರಿಯ ಏಷ್ಯನ್ ಟೂರ್ ಚಾಂಪಿಯನ್‌ ಗಾಲ್ಫ್ ಆಟಗಾರ ರಶೀದ್ ಖಾನ್ ಲಾಕ್‌ಡೌನ್ ಸಂದರ್ಭದ ಬೇಸರ ಕಳೆಯಲು ಸಮರಕಲೆಗೆ ಮೊರೆ ಹೋಗಿದ್ದಾರೆ.

ಒಲಿಂಪಿಕ್ಸ್ ಅರ್ಹತಾ ರ‍್ಯಾಂಕಿಂಗ್‌ನ ಅಗ್ರ 60ರಲ್ಲಿ ಸ್ಥಾನ ಗಳಿಸಿರುವ ರಶೀದ್ ಲಾಕ್‌ ಡೌನ್ ಆರಂಭವಾದ ದಿನದಿಂದ ಮನೆಯಲ್ಲೇ ಇದ್ದಾರೆ.‘ಮನೆಯಲ್ಲೇ ಸಮರಕಲೆಯನ್ನು ಅಭ್ಯಾಸ ಮಾಡುತ್ತಿದ್ದೇನೆ. ಯುಟ್ಯೂಬ್‌ನಲ್ಲಿ ಅಮೆರಿಕದ ಬಿಲಿ ಬ್ಲ್ಯಾಂಕ್ಸ್ ಅವರ ವಿಡಿಯೊವನ್ನು ನೋಡಿ ಕಲಿಯುತ್ತಿದ್ದೇನೆ. ಮನೆಯಲ್ಲಿ ಜಿಮ್ ಇಲ್ಲದ ಕಾರಣ ಸದ್ಯ ಫಿಟ್‌ನೆಸ್ ಕಾಪಾಡಿಕೊಳ್ಳಲು ನನಗೆ ಇರುವ ದಾರಿ ಇದೊಂದೇ’ ಎಂದು 29 ವರ್ಷದ ರಶೀದ್ ಹೇಳಿದ್ದಾರೆ.

‘ಸಮರಕಲೆಯಲ್ಲಿ ವಿವಿಧ ಬಗೆಯ ವ್ಯಾಯಾಮಗಳಿವೆ. ನಾನು ಸಂಜೆ ಹೊತ್ತಲ್ಲಿ ಇವುಗಳ ಪೈಕಿ ಕೆಲವೊಂದನ್ನು ಅಭ್ಯಾಸ ಮಾಡುತ್ತಿದ್ದೇನೆ. ವಿಶೇಷವಾದದ್ದು ಏನಾದರೂ ಮಾಡಬೇಕೆಂದು ಹಾತೊರೆಯುವ ನನಗೆ ಇದು ಖುಷಿ ನೀಡುತ್ತಿದೆ. ಸಮೀಪದಲ್ಲೆಲ್ಲೂ ಗಾಲ್ಫ್ ಕೋರ್ಸ್‌ಗಳು ಇಲ್ಲದ ಕಾರಣ ಗಾಲ್ಫ್ ಅಭ್ಯಾಸ ಮಾಡಲು ಆಗುತ್ತಿಲ್ಲ. ಆದರೂ ಸ್ಟಿಕ್ ಅನ್ನು ಗಾಳಿಯಲ್ಲಿ ಸ್ವಿಂಗ್ ಮಾಡುವುದು ಮತ್ತಿತರ ವ್ಯಾಯಾಮಗಳನ್ನು ಮಾಡುತ್ತಿರುತ್ತೇನೆ ’ ಎಂದು ಅವರು ತಿಳಿಸಿದ್ದಾರೆ.

ಜಗತ್ತಿನ ಇತರ ಭಾಗಗಳಲ್ಲೂ ಗಾಲ್ಫರ್‌ಗಳು ಸಮಯ ಕಳೆಯಲು ವಿವಿಧ ಮಾರ್ಗಗಳನ್ನು ಅನುಸರಿಸುತ್ತಿದ್ದಾರೆ. ಬೆಂಗಳೂರಿನ ಚಿಕ್ಕರಂಗಪ್ಪ ಅವರು ತಾರಸಿ ಮೇಲೆ ಬಟ್ಟೆಯಲ್ಲಿ ಚೆಂಡನ್ನು ಕಟ್ಟಿ ಅದಕ್ಕೆ ಹೊಡೆದು ಅಭ್ಯಾಸ ಮಾಡುತ್ತಿದ್ದಾರೆ. ಚಂಡೀಗಢದ ಆದಿಲ್ ಬೇಡಿ ತಮ್ಮ ಮನೆಯನ್ನೇ ಪುಟ್ಟ ಗಾಲ್ಫ್ ಕೋರ್ಸ್ ಆಗಿ ಮಾರ್ಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT