ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೂಟೌಟ್‌ನಲ್ಲಿ ಗೆದ್ದ ಭಾರತಕ್ಕೆ ಬೋನಸ್ ಪಾಯಿಂಟ್‌

ಎಫ್‌ಐಎಚ್‌ ಪ್ರೊ ಹಾಕಿ ಲೀಗ್: ಅರ್ಜೆಂಟೀನಾ ವಿರುದ್ಧ ಮಿಂಚಿದ ಹರ್ಮನ್‌ಪ್ರೀತ್, ದಿಲ್‌ಪ್ರೀತ್‌, ಶ್ರೀಜೇಶ್
Last Updated 11 ಏಪ್ರಿಲ್ 2021, 13:36 IST
ಅಕ್ಷರ ಗಾತ್ರ

ಬ್ಯೂನಸ್ ಐರಿಸ್: ರೋಚಕ ಅಂತ್ಯ ಕಂಡ ಪಂದ್ಯದಲ್ಲಿ ಪೆನಾಲ್ಟಿ ಶೂಟೌಟ್‌ ಮೂಲಕ ಒಲಿಂಪಿಕ್ ಚಾಂಪಿಯನ್ ಅರ್ಜೆಂಟೀನಾವನ್ನು ಮಣಿಸಿದ ಭಾರತ ತಂಡ ಎಫ್‌ಐಎಚ್‌ ಪ್ರೊ ಹಾಕಿ ಲೀಗ್‌ನ ಮೊದಲ ಪಂದ್ಯದಲ್ಲಿ ಬೋನಸ್ ಪಾಯಿಂಟ್ ಗಳಿಸಿ ಸಂಭ್ರಮಿಸಿತು.

ಹರ್ಮನ್‌ಪ್ರೀತ್ ಸಿಂಗ್ ಗಳಿಸಿದ ಎರಡು ಗೋಲುಗಳ ನೆರವಿನಿಂದ ನಿಗದಿತ ಅವಧಿಯಲ್ಲಿ ಆತಿಥೇಯರ ವಿರುದ್ಧ ಭಾರತ ಸೋಲಿನಿಂದ ಪಾರಾಗಿತ್ತು. 21ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಕಾರ್ನರ್‌ನಲ್ಲಿ ಹರ್ಮನ್‌ಪ್ರೀತ್ ಸಿಂಗ್ ಗೋಲು ಗಳಿಸಿ ಮಿಂಚಿದರು. ಆದರೆ 28 ಮತ್ತು 30ನೇ ನಿಮಿಷಗಳಲ್ಲಿ ಚೆಂಡನ್ನು ಗುರಿ ಮುಟ್ಟಿಸಿದ ಮಾರ್ಟಿನ್ ಫೆರೇರೊ ಮೊದಲಾರ್ಧದ ಮುಕ್ತಾಯದ ವೇಳೆ ಅರ್ಜೆಂಟೀನಾಗೆ 2–1ರ ಮುನ್ನಡೆ ಗಳಿಸಿಕೊಟ್ಟರು.

60ನೇ ನಿಮಿಷದಲ್ಲಿ ಗೋಲು ಗಳಿಸಿ ಹರ್ಮನ್‌ಪ್ರೀತ್ ಸಿಂಗ್ ಭಾರತದ ಕೈ ಹಿಡಿದರು. ಹೀಗಾಗಿ ಪಂದ್ಯ ಪೆನಾಲ್ಟಿ ಶೂಟೌಟ್‌ಗೆ ಸಾಗಿತು. ಈ ಹಂತದಲ್ಲಿ ಅಮೋಘ ಗೋಲ್‌ಕೀಪಿಂಗ್ ಸಾಮರ್ಥ್ಯ ತೋರಿದ ಶ್ರೀಜೇಶ್ ಭಾರತಕ್ಕೆ ಗೆಲುವು ತಂದುಕೊಟ್ಟರು. ಟೂರ್ನಿಯ ನಿಯಮದ ಪ್ರಕಾರ ಶೂಟೌಟ್‌ನಲ್ಲಿ ಗೆಲ್ಲುವ ತಂಡಕ್ಕೆ ಬೋನಸ್ ಪಾಯಿಂಟ್ ಸಿಗುತ್ತದೆ.

ಅನುಭವಿ ಗೋಲ್‌ಕೀಪರ್ ಜುವಾನ್ ವಿವಾಲ್ಡಿ ಅವರನ್ನು ವಂಚಿಸಿ ದಿಲ್‌ಪ್ರೀತ್ ಸಿಂಗ್ ಭಾರತದ ಪರ ಗೋಲು ಗಳಿಸಿದರೆ ಲೂಕಾಸ್ ವಿಲಾ, ಮಾರ್ಟಿನ್ ಫೆರೇರೊ ಮತ್ತು ಇಗ್ನಾಷಿಯೊ ಒರ್ಟಿಸ್ ಅವರ ಆಕ್ರಮಣವನ್ನು ತಡೆದು ಶ್ರೀಜೇಶ್ ಮಿಂಚಿದರು.

ಈ ಜಯದೊಂದಿಗೆ ಭಾರತ ಏಳು ಪಂದ್ಯಗಳಲ್ಲಿ 12 ಪಾಯಿಂಟ್‌ಗಳೊಂದಿಗೆ ಪಾಯಿಂಟ್ ಪಟ್ಟಿಯ ಐದನೇ ಸ್ಥಾನಕ್ಕೇರಿತು. 11 ಪಂದ್ಯಗಳಲ್ಲಿ 11 ಪಾಯಿಂಟ್ ಗಳಿಸಿದ ಅರ್ಜೆಂಟೀನಾ ಆರನೇ ಸ್ಥಾನಕ್ಕೆ ಕುಸಿಯಿತು. ಹರ್ಮನ್‌ಪ್ರೀತ್ ಸಿಂಗ್ ಅವರನ್ನು ಪಂದ್ಯಶ್ರೇಷ್ಠ ಆಟಗಾರನಾಗಿ ಆಯ್ಕೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT