ಗುರುವಾರ , ಆಗಸ್ಟ್ 5, 2021
22 °C

ವಿಶ್ವ ಕೆಡೆಟ್‌ ಕುಸ್ತಿ: ಅಮನ್‌, ಸಾಗರ್‌ಗೆ ಚಿನ್ನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬುಡಾಪೆಸ್ಟ್ : ಭಾರತದ ಯುವ ಕುಸ್ತಿಪಟುಗಳಾದ ಅಮನ್ ಗುಲಿಯಾ ಮತ್ತು ಸಾಗರ್ ಜಗ್ಲನ್‌ ಅವರು ವಿಶ್ವ ಕೆಡೆಟ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.

ಮಂಗಳವಾರ ರಾತ್ರಿ ನಡೆದ 48 ಕೆಜಿ ವಿಭಾಗದ ಫೈನಲ್‌ ಹಣಾಹಣಿಯಲ್ಲಿ ಅಮನ್‌ 5–2ರಿಂದ ಅಮೆರಿಕದ ಲ್ಯೂಕ್‌ ಜೋಸೆಫ್‌ ಲಿಲ್ಲೆಡಹಲ್‌ ಅವರನ್ನು ಚಿತ್ ಮಾಡಿದರು.

80 ಕೆಜಿ ವಿಭಾಗದ ಪ್ರಶಸ್ತಿ ಸುತ್ತಿನ ಬೌಟ್‌ನಲ್ಲಿ ಸಾಗರ್ 4–0ಯಿಂದ ಅಮೆರಿಕದ ಎದುರಾಳಿ ಜೇಮ್ಸ್ ಮೋಕ್ಲರ್‌ ರೌಲಿ ಎದುರು ಜಯ ಸಾಧಿಸಿದರು.

110 ಕೆಜಿ ವಿಭಾಗದ ಬೌಟ್‌ನಲ್ಲಿ ಕಜಕಸ್ತಾನದ ಅಲಿಖಾನ್‌ ಕುಸ್ಸೈನೊವ್ ಅವರನ್ನು ಮಣಿಸಿದ ಭಾರತದ ಸಾಹಿಲ್‌ ಕಂಚಿನ ಪದಕಕ್ಕೆ ಮುತ್ತಿಟ್ಟರು.

ಕಂಚಿನ ಪದಕದ ಇನ್ನೊಂದು ಬೌಟ್‌ನಲ್ಲಿ ವೈಭವ್ ಪಾಟೀಲ್‌ (55 ಕೆಜಿ) ಅವರು 5–7ರಿಂದ ಅಜರ್‌ಬೈಜಾನ್‌ನ ಜಾವಿದ್‌ ಜಾವದೊಯ್ ಎದುರು ಸೋತರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು