ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌ಸಿಎ–ಬಿಡಿಕೆ ಜಂಟಿ ಚಾಂಪಿಯನ್‌

ಕ್ರಿಕೆಟ್‌: ಮಳೆಯ ಕಾರಣದಿಂದ ಪೂರ್ಣಗೊಳ್ಳದ ಫೈನಲ್‌ ಪಂದ್ಯ
Last Updated 21 ಫೆಬ್ರುವರಿ 2021, 15:31 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಫೈನಲ್‌ ಪಂದ್ಯಕ್ಕೆ ಮಳೆ ಅಡ್ಡಿಯಾದ್ದರಿಂದ 16 ವರ್ಷದ ಒಳಗಿನವರ‘ಪಿಆರ್‌ಎನ್‌’ ಟ್ರೋಫಿ ಅಂತರ ಕ್ಯಾಂಪ್‌ಗಳ ಆಹ್ವಾನಿತ ಟೂರ್ನಿಯಲ್ಲಿ ಹುಬ್ಬಳ್ಳಿ ಕ್ರಿಕೆಟ್‌ ಅಕಾಡೆಮಿ (ಎಚ್‌ಸಿಎ) ಮತ್ತು ಬಿಡಿಕೆ ಸ್ಪೋರ್ಟ್ಸ್ ಫೌಂಡೇಷನ್‌ ತಂಡಗಳನ್ನು ಜಂಟಿ ವಿಜೇತರೆಂದು ಘೋಷಿಸಲಾಯಿತು.

ಜಿಮ್ಖಾನಾ ಮೈದಾನದಲ್ಲಿ ಭಾನುವಾರ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಬಿಡಿಕೆ 28.4 ಓವರ್‌ಗಳಲ್ಲಿ 92 ರನ್‌ ಗಳಿಸಿ ಆಲೌಟ್‌ ಆಯಿತು. ಎಚ್‌ಸಿಎ ಇನಿಂಗ್ಸ್ ಆರಂಭಿಸುವ ಸಮಯದಲ್ಲಿ ಮಳೆ ಬಂತು. ಕೆಲ ಹೊತ್ತಿನ ಬಳಿಕ ಪಂದ್ಯ ನಡೆಸಲು ಅಂಪೈರ್‌ಗಳು ಪಿಚ್‌ ಪರಿಶೀಲಿಸಿದರಾದರೂ ಆಡಲು ಸೂಕ್ತವಾಗಿಲ್ಲ ಎಂದು ತೀರ್ಮಾನಿಸಿ ಪ್ರಶಸ್ತಿ ಹಂಚಲಾಯಿತು. ಎಚ್‌ಸಿಎ ತಂಡದ ಆದಿತ್ಯ ಉಮ್ರಾಣಿ 74 ರನ್‌ ಗಳಿಸಿ 14 ವಿಕೆಟ್‌ಗಳನ್ನು ಕಬಳಿಸಿ ಟೂರ್ನಿಯ ಶ್ರೇಷ್ಠ ಆಟಗಾರ ಗೌರವಕ್ಕೆ ಭಾಜನರಾದರು.

ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿದ ಬಿಡಿಕೆ ತಂಡದ ಸಂಕಲ್ಪ ತೆಗ್ಗಿಹಳ್ಳಿ (ಉತ್ತಮ ಬ್ಯಾಟ್ಸ್‌ಮನ್‌), ಎಚ್‌ಸಿಎ ತಂಡ ಮಣಿಕಂಠ ಬುಕಿಟಗಾರ (ಉತ್ತಮ ಬೌಲರ್‌), ಧಾರವಾಡದ ಫಸ್ಟ್‌ ಕ್ರಿಕೆಟ್‌ ಅಕಾಡೆಮಿಯ ಅನ್ಶ್‌ ಪಾಲಂಕರ್‌ (ಉತ್ತಮ ಫೀಲ್ಡರ್‌)ಮತ್ತು ಎಚ್‌ಸಿಎ ತಂಡದ ಅನ್ಮೋನ್‌ ಪಗಾಡ್‌ (ಉತ್ತಮ ವಿಕೆಟ್ ಕೀಪರ್‌) ವೈಯಕ್ತಿಕ ಪ್ರಶಸ್ತಿಗಳನ್ನು ಪಡೆದರು.

ಉದಯೋನ್ಮುಖ ಆಟಗಾರರು ವಿಶೇಷ ಗೌರವವನ್ನು ಭುವನ್‌ ಬಿ. (ಬಿಡಿಕೆ), ಪ್ರಥಮ ಲಡಾದ (ಹುಬ್ಬಳ್ಳಿ ಕೋಲ್ಟ್ಸ್‌), ಆದಿತ್ಯ ಡಂಗನವರ (ತೇಜಲ್‌ ಶಿರಗುಪ್ಪಿ ಅಕಾಡೆಮಿ), ಲಕ್ಷ್ಮಿನಾರಾಯಣ ಭಟ್‌ (ವಿಎಂಸಿಎ), ವೇದಾಂಗ ಬಿ. (ಎಸ್‌ಡಿಎಂ), ನಿತಿನ್ ಗುಡದೂರ (ಫಸ್ಟ್ ಕ್ರಿಕೆಟ್‌ ಅಕಾಡೆಮಿ), ಆದಿತ್ಯ ಖಿಲಾರೆ (ಎಚ್‌ಸಿಎ), ಬಾಲಕಿಯರ ನೀಡಲಾದ ವಿಶೇಷ ಪ್ರಶಸ್ತಿಗಳನ್ನು ರಿಮ್‌ ಜಿಮ್‌ ಶುಕ್ಲಾ (ಹುಬ್ಬಳ್ಳಿ ಕೋಲ್ಟ್ಸ್‌), ಲಕ್ಷ್ಮೀ ಬಾಗೇವಾಡಿ (ಚಾಂಪಿಯನ್ಸ್‌ ನೆಟ್‌) ಮತ್ತು ಚಿನ್ಮಯಿ ಎಸ್‌. ಬುಕಿಟಗಾರ (ಎಚ್‌ಸಿಎ) ಪಡೆದುಕೊಂಡರು.ಉದ್ಯಮಿಗಳಾದಉಮೇಶ ನೀಲಿ, ಕಾರ್ತಿಕ್‌ ನಾಯಕ ಪ್ರಶಸ್ತಿ ಪ್ರದಾನ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT