ಬುಧವಾರ, ಜುಲೈ 6, 2022
23 °C

ಹಾಕಿ ಟೂರ್ನಿ: ಕುಸಿದು ಬಿದ್ದು ಆಟಗಾರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಾಪೋಕ್ಲು (ಕೊಡಗು): ಸಮೀಪದ ಮೂರ್ನಾಡು ಗ್ರಾಮದ ಬಾಚೆಟ್ಟೀರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ಶನಿವಾರ ಆರಂಭವಾದ ಕೊಡವ ಕುಟುಂಬಗಳ ಚೌರೀರ ಕಪ್ ಹಾಕಿ ಟೂರ್ನಿಯಲ್ಲಿ ಪಂದ್ಯ ನಡೆಯುತ್ತಿದ್ದಾಗಲೇ ಹಾಕಿ ಆಟಗಾರ ಸೋಮಣ್ಣ (23) ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟರು.

ಅವರು ಬಲಮುರಿ ಗ್ರಾಮದ ತೊತ್ತಿಯಂಡ ವಿಠಲ್ ದೇವಯ್ಯ ಅವರ ಪುತ್ರ. ಬಟ್ಟಿರ ಹಾಗೂ ತೊತ್ತಿಯಂಡ ತಂಡಗಳ ನಡುವೆ ನಡೆಯುತ್ತಿದ್ದ ಹಾಕಿ ಪಂದ್ಯದ ವೇಳೆ ಈ ಅವಘಡ ನಡೆಯಿತು. ವೈದ್ಯರ ತಂಡವು ಪ್ರಾಥಮಿಕ ಚಿಕಿತ್ಸೆ ನೀಡಿ ತುರ್ತು ಚಿಕಿತ್ಸಾ ವಾಹನದಲ್ಲಿ ಜಿಲ್ಲಾ ಆಸ್ಪತ್ರೆಗೆ ರವಾನಿಸುತ್ತಿದ್ದಾಗಲೇ ಮೃತಪಟ್ಟರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು