ಭಾನುವಾರ, ಜೂನ್ 20, 2021
28 °C

ಹಾಕಿ ಆಟಗಾರ್ತಿಯರು ಕೋವಿಡ್‌ನಿಂದ ಗುಣಮುಖ

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಭಾರತ ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್ ಹಾಗೂ ತಂಡದ ಇತರ ಆರು ಮಂದಿ ಆಟಗಾರ್ತಿಯರು ಹಾಗೂ ಇಬ್ಬರು ನೆರವು ಸಿಬ್ಬಂದಿ ಕೋವಿಡ್‌ನಿಂದ ಗುಣಮುಖರಾಗಿದ್ದಾರೆ. ಎರಡು ವಾರಗಳ ಹಿಂದೆ ಇವರೆಲ್ಲರಿಗೂ ಕೊರೊನಾ ಸೋಂಕು ದೃಢಪಟ್ಟಿತ್ತು. ಇಲ್ಲಿಯ ಭಾರತ ಕ್ರೀಡಾ ಪ್ರಾಧಿಕಾರ (ಸಾಯ್‌) ಕೇಂದ್ರದಲ್ಲಿ ಕ್ವಾರಂಟೈನ್ ಆಗಿದ್ದರು.

ರಾಣಿ ಅಲ್ಲದೆ ಸವಿತಾ ಪೂನಿಯಾ, ಶರ್ಮಿಳಾ ದೇವಿ, ರಜನಿ, ನವಜೋತ್ ಕೌರ್‌, ನವನೀತ್ ಕೌರ್‌ ಮತ್ತು ಸುಶೀಲಾ, ವಿಡಿಯೊ ಅನಾಲಿಸ್ಟ್‌ ಅಮೃತಾಪ್ರಕಾಶ್‌ ಹಾಗೂ ವೈಜ್ಞಾನಿಕ ಸಲಹೆಗಾರ ವೇಯ್ನ್‌ ಲೊಂಬಾರ್ಡ್‌ ಕೋವಿಡ್‌ನಿಂದ ಚೇತರಿಸಿಕೊಂಡವರು.

‘ಎರಡು ವಾರಗಳಿಂದ ದೂರವಾಣಿ ಕರೆ ಮತ್ತು ಸಂದೇಶಗಳ ಮೂಲಕ ನಮಗೆ ಮಾನಸಿಕ ಬೆಂಬಲ ಹಾಗೂ ಪ್ರೀತಿ ತೋರಿದ ಎಲ್ಲರಿಗೂ ಕೃತಜ್ಞತೆಗಳು. ನಾನು ಹಾಗೂ ನನ್ನ ಸಹ ಆಟಗಾರ್ತಿಯರು ಮತ್ತು ನೆರವು ಸಿಬ್ಬಂದಿ ಕೋವಿಡ್‌ನಿಂದ ಸಂಪೂರ್ಣ ಗುಣಮುಖವಾಗಿದ್ದೇವೆ‘ ಎಂದು ರಾಣಿ ಅವರು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

‘ಹಾಕಿ ಸಿಬ್ಬಂದಿ, ಮಿತ್ರರು ಹಾಗೂ ಅಭಿಮಾನಿಗಳಿಂದ ಆಶೀರ್ವಾದ ಸಿಕ್ಕಿದೆ. ನಮ್ಮನ್ನು ಚೆನ್ನಾಗಿ ನೋಡಿಕೊಂಡ ಸಾಯ್‌ ಹಾಗೂ ಹಾಕಿ ಇಂಡಿಯಾಗೆ ವಿಶೇಷ ಧನ್ಯವಾದಗಳು‘ ಎಂದೂ ರಾಣಿ ಹೇಳಿದ್ದಾರೆ.

ದೇಶದ ಎಲ್ಲ ಜನರು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಹಾಗೂ ಕಷ್ಟದ ಸಂದರ್ಭದಲ್ಲಿ ಅಗತ್ಯ ಇರುವವರಿಗೆ ನೆರವಾಗಬೇಕು ಎಂದು ಕೋರಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು