ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ: ಡಿಪಿಎಸ್‌ಇಗೆ ಭರ್ಜರಿ ಜಯ

Last Updated 25 ನವೆಂಬರ್ 2022, 19:27 IST
ಅಕ್ಷರ ಗಾತ್ರ

ಬೆಂಗಳೂರು: ಶಾಹುಲ್ ಹಾಗೂ ಅಶು ಗಳಿಸಿದ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಡೆಲ್ಲಿ ಪಬ್ಲಿಕ್ ಸ್ಕೂಲ್ ಈಸ್ಟ್ (ಡಿಪಿಎಸ್‌ಇ) ತಂಡವು ರಾಜ್ಯ ಸಿ ಡಿವಿಷನ್‌ ಲೀಗ್ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ಭರ್ಜರಿ ಜಯ
ಗಳಿಸಿತು.

ಶುಕ್ರವಾರ ಇಲ್ಲಿ ನಡೆದ ಪಂದ್ಯದಲ್ಲಿಡಿಪಿಎಸ್‌ಇ 5–0ಯಿಂದ ಸದರ್ನ್‌ ಅಲ್ಫಾ ಸ್ಪೋರ್ಟ್ಸ್ ಅಕಾಡೆಮಿ ತಂಡವನ್ನು ಸೋಲಿಸಿತು. ಶಾಹುಲ್‌ 2 ಮತ್ತು 29ನೇ ನಿಮಿಷಗಳಲ್ಲಿ ಗೋಲು ಗಳಿಸಿದರು. ಅಶು (8 ಮತ್ತು 17ನೇ ನಿ.) ಮೊಹಮ್ಮದ್ ಸಿಯಾ (19ನೇ ನಿ.) ವಿಜೇತ ತಂಡದ ಪರ ಗೋಲು ದಾಖಲಿಸಿದರು

ಇನ್ನೊಂದು ಪಂದ್ಯದಲ್ಲಿ ಈಸ್ಟ್ ಇಂಡಿಯಾ ಹಾಕಿ ಕ್ಲಬ್‌ 2–2ರಿಂದ ಐಡಿಯಲ್ ಸ್ಪೋರ್ಟ್ಸ್ ಅಕಾಡೆಮಿ ತಂಡದೊಂದಿಗೆ ಡ್ರಾ ಸಾಧಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT