ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೊ ಲೀಗ್‌ ಹಾಕಿ: ಕನ್ನಡಿಗ ಸುನಿಲ್‌ಗೆ ಅವಕಾಶ

ನೆದರ್ಲೆಂಡ್ಸ್ ಎದುರು ಪ್ರೊ ಲೀಗ್‌ ಹಾಕಿ ಪಂದ್ಯ; ಮರಳಿದ ಚಿಂಗ್ಲೆಸನಾ, ಸುಮಿತ್
Last Updated 13 ಜನವರಿ 2020, 20:00 IST
ಅಕ್ಷರ ಗಾತ್ರ

ನವದೆಹಲಿ: ಎಫ್‌ಐಎಚ್‌ ಪ್ರೊ ಲೀಗ್‌ ಹಾಕಿ ಟೂರ್ನಿಯಲ್ಲಿ ನೆದರ್ಲೆಂಡ್ಸ್ ಎದುರಿನ ಮೊದಲ ಎರಡು ಪಂದ್ಯಗಳಿಗೆ ಭಾರತ ತಂಡವನ್ನು ಸೋಮವಾರ ಪ್ರಕಟಿಸಲಾಗಿದೆ.

ಕನ್ನಡಿಗ ಎಸ್‌.ಸುನೀಲ್‌ ಅವಕಾಶ ಪಡೆದಿದ್ದು, ಗಾಯದಿಂದ ಚೇತರಿಸಿಕೊಂಡಿರುವ ಮಿಡ್‌ಫೀಲ್ಡರ್‌ಗಳಾದ ಚಿಂಗ್ಲೆಸನಾ ಸಿಂಗ್‌ ಹಾಗೂ ಸುಮಿತ್‌ ಕೂಡ 20 ಮಂದಿಯ ತಂಡದಲ್ಲಿದ್ದಾರೆ. ಮನ್‌ಪ್ರೀತ್‌ ಸಿಂಗ್‌ ನಾಯಕನ ಹೊಣೆ ನಿಭಾಯಿಸಲಿದ್ದಾರೆ.

2019ರ ಫೆಬ್ರುವರಿಯಲ್ಲಿ ರಾಷ್ಟ್ರೀಯ ಸೀನಿಯರ್‌ ಹಾಕಿ ಚಾಂಪಿ ಯನ್‌ಷಿಪ್‌ ಆಡಿದ ಬಳಿಕ ಚಿಂಗ್ಲೆಸನಾ ತಂಡದ ಪರ ಕಣಕ್ಕಿಳಿದಿರಲಿಲ್ಲ. ಅವರು ಪಾದದ ನೋವಿಗೆ ಒಳಗಾಗಿದ್ದರು. ಜೂನ್‌ನಲ್ಲಿ ನಡೆದ ಎಫ್‌ಐಎಚ್‌ ಹಾಕಿ ಸರಣಿಯಲ್ಲಿ ಮಣಿಕಟ್ಟಿನ ಗಾಯದಿಂದ ಬಳಲಿದ್ದ ಸುಮಿತ್‌ ಆ ಬಳಿಕ ಆಡಿರಲಿಲ್ಲ.

ಉಪನಾಯಕನ ಸ್ಥಾನಕ್ಕೆ ಡ್ರ್ಯಾಗ್‌ಫ್ಲಿಕರ್ ಹರ್ಮನ್‌ಪ್ರೀತ್‌ ಸಿಂಗ್‌ ಅವರನ್ನು ನೇಮಿಸಲಾಗಿದೆ. ಭುವನೇಶ್ವರದ ಕಳಿಂಗ ಹಾಕಿ ಕ್ರೀಡಾಂಗಣದಲ್ಲಿ ಜನವರಿ 18 ಹಾಗೂ 19ರಂದುನೆದರ್ಲೆಂಡ್ಸ್ ವಿರುದ್ಧದ ಪಂದ್ಯಗಳು ನಡೆಯಲಿವೆ.

ತಂಡ ಇಂತಿದೆ: ಮನ್‌ಪ್ರೀತ್‌ ಸಿಂಗ್‌ (ನಾಯಕ),ಹರ್ಮನ್‌ಪ್ರೀತ್‌ ಸಿಂಗ್‌ (ಉಪನಾಯಕ), ಎಸ್‌.ವಿ.ಸುನಿಲ್‌, ಪಿ.ಆರ್‌.ಶ್ರೀಜೇಶ್‌, ಕೃಷ್ಣ ಬಹಾದ್ದೂರ್‌ ಪಾಠಕ್‌, ಗುರಿಂದರ್‌ ಸಿಂಗ್‌, ಅಮಿತ್‌ ರೋಹಿದಾಸ್‌, ಸುರೇಂದರ್‌ ಕುಮಾರ್‌, ಬೀರೇಂದ್ರ ಲಾಕ್ರಾ, ರೂಪಿಂದರ್‌ ಪಾಲ್‌ ಸಿಂಗ್‌, ವಿವೇಕ್‌ ಸಾಗರ್‌ ಪ್ರಸಾದ್‌, ಚಿಂಗ್ಲೆಸನಾ ಸಿಂಗ್‌, ನೀಲಕಂಠ ಶರ್ಮಾ, ಸುಮಿತ್‌, ಗುರ್ಜಂತ್‌ ಸಿಂಗ್‌, ಲಲಿತ್‌ ಕುಮಾರ್‌ ಉಪಾಧ್ಯಾಯ, ಮನದೀಪ್‌ ಸಿಂಗ್‌, ಆಕಾಶ ದೀಪ್‌ ಸಿಂಗ್‌, ಗುರುಸಾಹಿಬ್‌ಜೀತ್‌ ಸಿಂಗ್‌, ಕೊತಜಿತ್‌ ಸಿಂಗ್‌ ಖದಂಗ್‌ಬಮ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT