ಗುರುವಾರ , ಮಾರ್ಚ್ 23, 2023
22 °C

ಹಾಕಿ: ಜರ್ಮನಿಗೆ ವಿಶ್ವಕಪ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಭುವನೇಶ್ವರ (ಪಿಟಿಐ): ಜರ್ಮನಿ ತಂಡವು ಬೆಲ್ಜಿಯಂ ತಂಡವನ್ನು ಪರಾಭ ವಗೊಳಿಸಿ ಮೂರನೇ ಬಾರಿ ವಿಶ್ವಕಪ್ ಹಾಕಿ ಟೂರ್ನಿಯ ಪ್ರಶಸ್ತಿ ಜಯಿಸಿತು.

ಭಾನುವಾರ ಕಳಿಂಗ ಕ್ರೀಡಾಂಗಣದಲ್ಲಿ ನಡೆದ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಸಡನ್‌ ಡೆತ್‌ನಲ್ಲಿ ಜರ್ಮನಿ 5–4ರಿಂದ ಬೆಲ್ಜಿಯಂ ತಂಡಕ್ಕೆ ಸೋಲುಣಿಸಿತು.

ಈ ಮೊದಲು ಜರ್ಮನಿ 2002 ಮತ್ತು 2006ರಲ್ಲಿ ಪ್ರಶಸ್ತಿ ಜಯಿಸಿತ್ತು.

ನಿಗದಿತ ಅವಧಿಯಲ್ಲಿ ಉಭಯ ತಂಡಗಳು ತಲಾ ಮೂರು ಗೋಲು ಗಳಿಸಿದ್ದವು.  ಜರ್ಮನಿ ಪರ ನಿಕ್ಲಾಸ್‌ ವೆಲ್ಲೆನ್‌ (29ನೇ ನಿಮಿಷ), ಗೊಂಜಾಲೊ ಪೆಲ್ಲಾಟ್‌ (41ನೇ ನಿ.) ಮತ್ತು ನಾಯಕ ಮ್ಯಾಟ್‌ ಗ್ರಾಂಬಶ್‌ ನಿಗದಿತ ಅವಧಿ ಯಲ್ಲಿ ಗೋಲು ಗಳಿಸಿದರು. ಬೆಲ್ಜಿಯಂ ತಂಡಕ್ಕಾಗಿ ಫ್ಲಾರೆಂಟ್‌ ವ್ಯಾನ್ ಅಬೆಲ್‌ ಫ್ಲಾರೆಂಟ್‌ (10ನೇ ನಿ.), ಟಾಂಗಿ ಕಾಸಿನ್ಸ್ (11ನೇ ನಿ.) ಮತ್ತು ಟಾಮ್ ಬೂನ್ (59ನೇ ನಿ.) ಗೋಲು ಹೊಡೆದರು.

ನೆದರ್ಲೆಂಡ್ಸ್ ತಂಡಕ್ಕೆ ಕಂಚು: ನಾಯಕ ಥಿಯರಿ ಬ್ರಿಂಕ್‌ಮನ್‌ ಗಳಿಸಿದ ಎರಡು ಗೋಲುಗಳ ನೆರವಿನಿಂದ ನೆದರ್ಲೆಂಡ್ಸ್ ತಂಡವು ಆಸ್ಟ್ರೇಲಿಯಾವನ್ನು ಮಣಿಸಿ ಟೂರ್ನಿಯಲ್ಲಿ ಕಂಚಿನ ಪದಕ ಜಯಿಸಿತು.

ಭಾನುವಾರ ಮೂರನೇ ಸ್ಥಾನಕ್ಕಾಗಿ ಇಲ್ಲಿ ನಡೆದ ಪಂದ್ಯದಲ್ಲಿ ನೆದರ್ಲೆಂಡ್ಸ್ 3–1ರಿಂದ ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ತಂಡಕ್ಕೆ ಸೋಲುಣಿಸಿತು.

ಬ್ರಿಂಕ್‌ಮನ್‌ 35 ಮತ್ತು 40ನೇ ನಿಮಿಷಗಳಲ್ಲಿ ಚೆಂಡನ್ನು ಗುರಿ ಸೇರಿಸಿದರು. ಪೆನಾಲ್ಟಿ ಕಾರ್ನರ್ ಪರಿಣತ ಜಿಪ್ ಜಿನ್ಸೆನ್‌ (33ನೇ ನಿ.) ತಂಡದ ಇನ್ನೊಂದು ಗೋಲು ಗಳಿಸಿದರು. ಆಸ್ಟ್ರೇಲಿಯಾ ತಂಡಕ್ಕಾಗಿ ಜೆರೆಮಿ ಹೇವರ್ಡ್ 13ನೇ ನಿಮಿಷದಲ್ಲಿ ಗೋಲು ಹೊಡೆದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು