ಉನ್ನತ ಮಟ್ಟದ ಸೌಲಭ್ಯ ಒದಗಿಸಿ: ವಿನೇಶಾ

7

ಉನ್ನತ ಮಟ್ಟದ ಸೌಲಭ್ಯ ಒದಗಿಸಿ: ವಿನೇಶಾ

Published:
Updated:
Deccan Herald

ನವದೆಹಲಿ: ‘ಒಲಿಂಪಿಕ್‌ ಕ್ರೀಡಾಕೂಟದಲ್ಲಿ ಕುಸ್ತಿಪಟುಗಳಿಂದ ಪದಕಗಳನ್ನು ನಿರೀಕ್ಷಿಸಲಾಗುತ್ತದೆ. ಆದರೆ, ಅದಕ್ಕಾಗಿ ಸಿದ್ಧತೆ ನಡೆಸಲು ರಾಷ್ಟ್ರದಲ್ಲಿ ಉನ್ನತ ಮಟ್ಟದ ಸೌಲಭ್ಯಗಳು ನಮಗೆ ಸಿಗುವುದಿಲ್ಲ’ ಎಂದು ಭಾರತದ ಕುಸ್ತಿಪಟು ವಿನೇಶಾ ಪೋಗಟ್‌ ಹೇಳಿದ್ದಾರೆ. 

23 ವರ್ಷದ ವಿನೇಶಾ ಇತ್ತೀಚೆಗೆ ನಡೆದಿದ್ದ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಚಿನ್ನದ ಸಾಧನೆ ಮಾಡಿದ್ದರು. ಸ್ಪೇನ್‌ನಲ್ಲಿ ನಡೆದ ಗ್ರ್ಯಾನ್‌ ಪ್ರೀನಲ್ಲಿಯೂ ಅವರು ಚಿನ್ನಕ್ಕೆ ಕೊರಳೊಡ್ಡಿದ್ದರು. 

‘ಅತ್ಯಂತ ಕಠಿಣ ಸವಾಲಿನ ಒಲಿಂಪಿಕ್‌ ಕ್ರೀಡಾಕೂಟದಲ್ಲಿ ಪದಕ ಗೆಲ್ಲುವ ಸಾಮರ್ಥ್ಯ ಗಳಿಸಲು ಅನೇಕ ಸ್ತರಗಳಲ್ಲಿ ಸಿದ್ಧತೆ ನಡೆಸಬೇಕಾಗುತ್ತದೆ. ಇದಕ್ಕಾಗಿ ಅತ್ಯುನ್ನತ ಸೌಲಭ್ಯಗಳನ್ನು ಕಲ್ಪಿಸಬೇಕು. ತರಬೇತಿ ಕೇಂದ್ರಗಳಲ್ಲಿ ನೀಡುವ ಆಹಾರದ ಗುಣಮಟ್ಟ ಕೂಡ ಮುಖ್ಯ’ ಎಂದು ವಿನೇಶಾ ಅಭಿಪ್ರಾಯಪಟ್ಟಿದ್ದಾರೆ.  

‘ಭಾರತದ ಕುಸ್ತಿ ಫೆಡರೇಷನ್‌ ಈ ನಿಟ್ಟಿನಲ್ಲಿ ಕೆಲವು ಸುಧಾರಣೆಗಳನ್ನು ತಂದಿದೆ. ಆದರೆ, ಇನ್ನೂ ಅನೇಕ ಸ್ತರಗಳಲ್ಲಿ ಬದಲಾವಣೆಗಳಾಬೇಕಿದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !