ಏಷ್ಯನ್‌ ಕ್ರೀಡಾಕೂಟದ ಕಂಪೌಂಡ್‌ ಆರ್ಚರಿ: ಮೂರೇ ವಿಭಾಗಗಳಲ್ಲಿ ಭಾರತ ಸ್ಪರ್ಧೆ

7

ಏಷ್ಯನ್‌ ಕ್ರೀಡಾಕೂಟದ ಕಂಪೌಂಡ್‌ ಆರ್ಚರಿ: ಮೂರೇ ವಿಭಾಗಗಳಲ್ಲಿ ಭಾರತ ಸ್ಪರ್ಧೆ

Published:
Updated:

ಕೋಲ್ಕತ್ತ : ‘ಮುಂದಿನ ತಿಂಗಳು ನಡೆಯುವ ಏಷ್ಯನ್‌ ಕ್ರೀಡಾಕೂಟದಲ್ಲಿ ಕಂಪೌಂಡ್‌ ಆರ್ಚರಿ ಪಟುಗಳು ಕೇವಲ ಮೂರು ವಿಭಾಗಗಳಲ್ಲಿ ಮಾತ್ರ ಸ್ಪರ್ಧಿಸಲಿದ್ದಾರೆ’ ಎಂದು ಭಾರತದ ಆರ್ಚರಿ ಕೋಚ್‌ ಜೀವನ್‌ಜೋತ್‌ ಸಿಂಗ್‌ ಹೇಳಿದ್ದಾರೆ. 

ಸೋನೆ‍ಪತ್‌ನಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್‌)ದ ಕೇಂದ್ರದಲ್ಲಿ ತರಬೇತಿ ಶಿಬಿರದಲ್ಲಿ ಭಾರತೀಯ ಆರ್ಚರ್‌ಗಳು ಅಭ್ಯಾಸ ನಡೆಸುತ್ತಿದ್ದಾರೆ. ಇದೇ ವೇಳೆ ಜೀವನ್‌ಜೋತ್‌ ಸಿಂಗ್‌ ಮಾತನಾಡಿದ್ದಾರೆ.  

2014ರಲ್ಲಿ ಇಂಚೆನ್‌ನಲ್ಲಿ ನಡೆದ ಏಷ್ಯನ್‌ ಕ್ರೀಡಾಕೂಟದಲ್ಲಿ ಭಾರತವು ನಾಲ್ಕು ವಿಭಾಗಗಳಲ್ಲಿ ಪದಕಗಳನ್ನು ಜಯಿಸಿತ್ತು. ಆದರೆ, ಈ ಬಾರಿ ವೈಯಕ್ತಿಕ ವಿಭಾಗಗಳಲ್ಲಿ ಭಾರತ ಸ್ಪರ್ಧಿಸುತ್ತಿಲ್ಲ. 

‘ಇದು ನಿಜಕ್ಕೂ ನಮಗೆ ಹಿನ್ನಡೆಯಾಗಲಿದೆ. ಹಿಂದಿನ ಬಾರಿ ಎರಡು ಪದಕಗಳು ವೈಯಕ್ತಿಕ ವಿಭಾಗಗಳಲ್ಲಿ ಬಂದಿದ್ದವು. ಅಭಿಷೇಕ್‌ ವರ್ಮಾ ಬೆಳ್ಳಿ, ತ್ರಿಶಾ ದೇಬ್‌ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದರು’ ಎಂದು ಜೀವನ್‌ಜೋತ್‌ ತಿಳಿಸಿದ್ದಾರೆ. 

ಇತ್ತೀಚಿನ ಕ್ರೀಡಾಕೂಟಗಳಲ್ಲಿ ಅಮೋಘ ಸಾಧನೆ ಮಾಡಿದ್ದ ಭಾರತ ಮಹಿಳಾ ವಿಭಾಗದ ಕಂಪೌಂಡ್‌ ಆರ್ಚರಿ ತಂಡವು ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಅಲ್ಲದೇ, ಮಿಶ್ರ ವಿಭಾಗದಲ್ಲಿ ವರ್ಮಾ ಹಾಗೂ ಜ್ಯೋತಿ ಸುರೇಖಾ ವೆನ್ನಂ ಅವರು ಹಿಂದಿನ ಅನೇಕ ಕ್ರೀಡಾಕೂಟಗಳಲ್ಲಿ ಉತ್ತಮ ಸಾಧನೆ ತೋರಿದ್ದಾರೆ. ಇದೇ ಕಾರಣದಿಂದ ಮೂರೇ ವಿಭಾಗಗಳಲ್ಲಿ ಭಾರತ ಸ್ಪರ್ಧಿಸಿದರೂ ಪದಕಗಳನ್ನು ಗೆಲ್ಲುವ ಎಲ್ಲ ಸಾಮರ್ಥ್ಯ ಹೊಂದಿದೆ ಎಂದು ವಿಶ್ಲೇಷಿಸಲಾಗಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !