ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಅಥ್ಲೆಟಿಕ್ಸ್ ಫೆಡರೇಷನ್: ವೊಕರ್ ಹೆರ್ಮನ್ ಪದತ್ಯಾಗ

Last Updated 22 ನವೆಂಬರ್ 2020, 15:04 IST
ಅಕ್ಷರ ಗಾತ್ರ

ನವದೆಹಲಿ: ಭಾರತ ಅಥ್ಲೆಟಿಕ್ಸ್ ಫೆಡರೇಷನ್ ಹೈ ಪರ್ಫಾರ್ಮೆನ್ಸ್‌ ನಿರ್ದೇಶಕ ಸ್ಥಾನದಿಂದ ವೊಕರ್ ಹೆರ್ಮನ್ ಕೆಳಗಿಳಿದಿದ್ದಾರೆ.

ಅವರ ಕಾರ್ಯಾವಧಿಯನ್ನು 2024ರ ಒಲಿಂಪಿಕ್ಸ್‌ವರೆಗೂ ಈಚೆಗಷ್ಟೇ ಕೇಂದ್ರ ಕ್ರೀಡಾ ಸಚಿವಾಲಯವು ವಿಸ್ತರಿಸಿತ್ತು. ಆದರೆ ನಿರ್ದಿಷ್ಟವಾದ ಯಾವುದೇ ಕಾರಣ ನೀಡದೇ ಈಗ ತಮ್ಮ ಸ್ಥಾನ ಬಿಟ್ಟಿದ್ದಾರೆ ಎಂದು ಎಎಫ್‌ಐ ಮೂಲಗಳು ಹೇಳಿವೆ.

ಹೆರ್ಮನ್ ಅವರನ್ನು 2019ರಲ್ಲಿ ನೇಮಕ ಮಾಡಲಾಗಿತ್ತು. ಕೋವಿಡ್ –19 ಬಿಕ್ಕಟ್ಟಿನಿಂದಾಗಿ 2021ಕ್ಕೆ ಒಲಿಂಪಿಕ್ಸ್‌ ಮುಂದೂಡಲಾಗಿದೆ. ಅದರಿಂದಾಗಿ ಹೆರ್ಮನ್ ಅವರನ್ನು 2024ರ ಒಲಿಂಪಿಕ್ಸ್‌ಗೂ ಮುಂದುವರಿಸಲು ಸಚಿವಾಲಯ ನಿರ್ಧರಿಸಿತ್ತು.

’ಸುಮಾರು ಒಂದೂವರೆ ವರ್ಷ ಭಾರತದಲ್ಲಿ ಇದ್ದಿದ್ದು ಒಳ್ಳೆಯ ಅನುಭವ. ಸ್ವಯಂ ನಿರ್ಧರಿತ ಗುರಿಗಳು ಕೈಗೂಡದ ಹೊತ್ತು ಈಗ ಬಂದಿದೆ. ಆದ್ದರಿಂದ ಹೈಪರ್ಫಾರ್ಮೆನ್ಸ್‌ ನಿರ್ದೇಶಕ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದೇನೆ‘ ಎಂದು ಹೆರ್ಮನ್ ಹೋದವಾರ ತಮ್ಮ ಫೇಸ್‌ಬುಕ್ ಪುಟದಲ್ಲಿ ಬರೆದಿದ್ದರು.

’ಭಾರತದಲ್ಲಿ ಅಸಂಖ್ಯಾತ ಪ್ರತಿಭಾನ್ವಿತ ಅಥ್ಲೀಟ್‌ಗಳಿದ್ದಾರೆ. ಅವರ ಬೆಳವಣಿಗೆಗಾಗಿ ಸುಸ್ಥಿರ ಮೂಲಸೌಲಭ್ಯಗಳ ಅಗತ್ಯವಿದೆ. ಸ್ವತಂತ್ರ ಯೋಚನಾಲಹರಿ ಮತ್ತು ಗಟ್ಟಿಯಾದ ಆತ್ಮವಿಶ್ವಾಸವನ್ನು ಅಥ್ಲೀಟ್‌ಗಳಲ್ಲಿ ಬೆಳೆಸಬೇಕಿದೆ. ಅದರಿಂದಾಗಿ ಅವರು ವಿಶ್ವ ದರ್ಜೆಯ ಸಾಧನೆ ಮಾಡಲು ಸಾಧ್ಯವಾಗುತ್ತದೆ‘ ಎಂದು ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT