ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯನ್ ಚಾಂಪಿಯನ್‌ಷಿಪ್‌: ದುಬೈ ತಲುಪಿದ ಭಾರತ ಬಾಕ್ಸಿಂಗ್ ತಂಡ

Last Updated 22 ಮೇ 2021, 13:20 IST
ಅಕ್ಷರ ಗಾತ್ರ

ನವದೆಹಲಿ: ಮೇರಿ ಕೋಮ್ ಹಾಗೂ ಅಮಿತ್‌ ಪಂಗಲ್ ಅವರನ್ನೊಳಗೊಂಡ ಭಾರತದ ಬಾಕ್ಸಿಂಗ್ ತಂಡವು ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲು ಶನಿವಾರ ದುಬೈ ತಲುಪಿತು. ಆಡಳಿತಾತ್ಮಕ ದಾಖಲೆಗಳ ಸಮಸ್ಯೆಯಿಂದಾಗಿ ಬಾಕ್ಸರ್‌ಗಳಿದ್ದ ವಿಮಾನವು ನಿಲ್ದಾಣದಲ್ಲಿ ಲ್ಯಾಂಡ್ ಆಗಲು ವಿಳಂಬವಾಗಿತ್ತು. ಹೀಗಾಗಿ ನಿಗದಿಗಿಂತ ಹೆಚ್ಚು ಹೊತ್ತು ಅದು ಆಗಸದಲ್ಲಿ ಹಾರಾಡಿತ್ತು.

ಸೋಮವಾರದಿಂದ ಈ ಟೂರ್ನಿಯು ಆರಂಭವಾಗಬೇಕಿದೆ. ಜುಲೈನಲ್ಲಿ ನಿಗದಿಯಾಗಿರುವ ಒಲಿಂಪಿಕ್ಸ್‌ಗೂ ಮೊದಲು ನಡೆಯಲಿರುವ ಪ್ರಮುಖ ಬಾಕ್ಸಿಂಗ್ ಟೂರ್ನಿ ಇದು.

‘ಪ್ರವಾಸಕ್ಕೆ ಅನುಮೋದನೆ ಪಡೆಯುವ ವಿಷಯದಲ್ಲಿ ಸ್ವಲ್ಪ ಗೊಂದಲ ಮೂಡಿತ್ತು. ಅದು ಈಗ ಪರಿಹರಿಸಲ್ಪಟ್ಟಿದೆ. ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳಿಗೆ ಕೃತಜ್ಞತೆಗಳು. ವಿಮಾನ ಲ್ಯಾಂಡ್‌ ಆಗಸಲು ಸ್ವಲ್ಪ ಸಮಯ ತೆಗೆದುಕೊಂಡರೂ ಬಾಕ್ಸರ್‌ಗಳು ಈಗ ಹೊಟೇಲ್ ತಲುಪಿದ್ದಾರೆ. ಬಾಕ್ಸರ್‌ಗಳಿಗೆ ಕೋವಿಡ್‌ ಪರೀಕ್ಷೆಯನ್ನೂ ಮಾಡಲಾಗಿದೆ‘ ಎಂದು ತಂಡದ ಮೂಲಗಳು ಹೇಳಿವೆ.

ವಿನೋದ್‌ಗೆ ಕೋವಿಡ್‌: ಚಾಂಪಿಯನ್‌ಷಿಪ್‌ನ 49 ಕೆಜಿ ವಿಭಾಗದಲ್ಲಿ ಸ್ಪರ್ಧಿಸಬೇಕಿದ್ದ ವಿನೋದ್ ತನ್ವರ್ ಅವರಿಗೆ ಕೋವಿಡ್ ಖಚಿತಪಟ್ಟಿದೆ. ಹೀಗಾಗಿ ಅವರು ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಸದ್ಯ ಅವರು ಭಾರತದಲ್ಲೇ ಇದ್ದಾರೆ.

‘ಕೋವಿಡ್‌ ಖಚಿತಪಟ್ಟ ಕಾರಣ, ಏಷ್ಯನ್ ಚಾಂಪಿಯನ್‌ಷಿಪ್‌ಗೆ ಆಯ್ಕೆ ಮಾಡಲಾದ ತಂಡದಿಂದ ವಿನೋದ್ ತನ್ವರ್‌ ಅವರನ್ನು ಕೈಬಿಡಲಾಗಿದೆ‘ ಎಂದು ಭಾರತ ಬಾಕ್ಸಿಂಗ್ ಫೆಡರೇಷನ್ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT