ಸೋಮವಾರ, ಡಿಸೆಂಬರ್ 9, 2019
20 °C
ಕೊರಿಯಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌ ಟೂರ್ನಿ

ಶ್ರೀಕಾಂತ್‌, ಸಮೀರ್‌ಗೆ ಸೋಲು; ಭಾರತದ ಸವಾಲು ಅಂತ್ಯ

Published:
Updated:

ಗ್ವಾಂಗ್‌ಜು (ಕೊರಿಯಾ): ಕಿದಂಬಿ ಶ್ರೀಕಾಂತ್‌ ಮತ್ತು ಸಮೀರ್‌ ವರ್ಮಾ ಎದುರಾಳಿಗಳಿಗೆ ಶರಣಾಗುವ ಮೂಲಕ ಗುವಾಂಗ್‌ಜು ಕೊರಿಯಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಗುರುವಾರ ಭಾರತದ ಸವಾಲು ಅಂತ್ಯಗೊಂಡಿತು.

ಜಪಾನ್‌ನ ಕಂತ ಸುನೆಯಾಮಾ ಪುರುಷರ ಸಿಂಗಲ್ಸ್‌ ಎರಡನೇ ಸುತ್ತಿನಲ್ಲಿ 21–14, 21–19 ರಿಂದ ಆರನೇ ಶ್ರೇಯಾಂಕದ ಶ್ರೀಕಾಂತ್‌ ಅವರನ್ನು ಸೋಲಿಸಿದರು. ಕಳೆದ ವಾರ ಹಾಂಗ್‌ಕಾಂಗ್‌ ಓಪನ್‌ ಟೂರ್ನಿಯ ಸೆಮಿಫೈನಲ್‌ ತಲುಪುವ ಮೂಲಕ ಶ್ರೀಕಾಂತ್‌ ಲಯಕ್ಕೆ ಮರಳಿದಂತೆ ಕಂಡಿದ್ದರು. ಆದರೆ ಇಲ್ಲಿ ಗೇಮ್‌ಗಳಲ್ಲಿ ಮಣಿದರು.

40 ನಿಮಿಷಗಳ ಕಾಲ ನಡೆದ ಇನ್ನೊಂದು ಪಂದ್ಯದಲ್ಲಿ ಸಮೀರ್‌ 19–21, 12–21ರಲ್ಲಿ ಸ್ಥಳೀಯ ಆಟಗಾರ ಕಿಮ್‌ ದೊಂಗುನ್‌ ಅವರಿಗೆ ಮಣಿದರು. ಕಿಮ್‌, ವಿಶ್ವ ಕ್ರಮಾಂಕದಲ್ಲಿ 112ನೇ ಕ್ರಮಾಂಕ ಹೊಂದಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು