ಗುರುವಾರ , ನವೆಂಬರ್ 21, 2019
20 °C

ರ‍್ಯಾಲಿ: ಭರವಸೆಯಲ್ಲಿ ಗಿಲ್

Published:
Updated:

ಜೋಧ್‌ಪುರ: ಹಾಲಿ ಚಾಂಪಿಯನ್ ಗೌರವ್ ಗಿಲ್ ಅವರು ಶನಿವಾರ ಇಲ್ಲಿ ಆರಂಭವಾಗಲಿರುವ ಎಫ್ಎಂಎಸ್‌ಐ ರ‌್ಯಾಲಿಯಲ್ಲಿ ಪ್ರಶಸ್ತಿ ಉಳಿಸಿಕೊಳ್ಳುವ ಭರವಸೆಯೊಂದಿಗೆ ಕಣಕ್ಕೆ ಇಳಿಯಲಿದ್ದಾರೆ. ಇದು ರಾಷ್ಟ್ರೀಯ ರ‌್ಯಾಲಿಯ ಮೂರನೇ ಸುತ್ತು ಆಗಿದ್ದು ಮಂಗಳೂರಿನ ಡೀನ್ ಮಸ್ಕರೇನ್ಹಸ್‌, ಗಿಲ್‌ಗೆ ಸವಾಲೆಸೆಯಲಿದ್ದಾರೆ.

ಕಳೆದ ವಾರ ಟರ್ಕಿಯಲ್ಲಿ ನಡೆದಿದ್ದ ವಿಶ್ವ ರ‍್ಯಾಲಿ ಚಾಂಪಿಯನ್‌ಷಿಪ್‌ನಲ್ಲಿ ತಾಂತ್ರಿಕ ಸಮಸ್ಯೆಗಳನ್ನು ಮೆಟ್ಟಿ ನಿಂತು ಮುನ್ನುಗ್ಗಿದ ಗಿಲ್ ಪ್ರತಿಸ್ಪರ್ಧಿಗಳು ಮತ್ತು ಪ್ರೇಕ್ಷಕರ ಗಮನ ಸೆಳೆದಿದ್ದರು. ಇಲ್ಲಿ ಅವರೊಂದಿಗೆ ಸಹ ಚಾಲಕರಾಗಿ ಮಂಗಳೂರಿನ ಮೂಸಾ ಷರೀಫ್ ಕಣಕ್ಕೆ ಇಳಿಯಲಿದ್ದಾರೆ.

ಪ್ರತಿಕ್ರಿಯಿಸಿ (+)