ಶುಕ್ರವಾರ, ಡಿಸೆಂಬರ್ 13, 2019
26 °C

ಭಾರತದ ಶೂಟರ್‌ಗಳಿಗೆ ಅಧ್ಯಕ್ಷರ ಟ್ರೋಫಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಪುಟಿಯಾನ್ (ಚೀನಾ): ಐಎಸ್‌ಎಸ್‌ಎಫ್‌ ವಿಶ್ವಕಪ್ ಫೈನಲ್ಸ್‌ನಲ್ಲಿ ಭಾರತದ ಶೂಟರ್‌ಗಳು ಅಮೋಘ ಸಾಧನೆ ಮಾಡಿದ್ದಾರೆ. 10 ಮೀಟರ್ಸ್ ಏರ್ ಪಿಸ್ತೂಲ್ ಮತ್ತು ಏರ್‌ ರೈಫಲ್ ಮಿಶ್ರ ತಂಡ ವಿಭಾಗಗಳಲ್ಲಿ ಅಧ್ಯಕ್ಷರ ಟ್ರೋಫಿ ಗೆದ್ದ ತಂಡಗಳಲ್ಲಿ ಗಮನ ಸೆಳೆದರು. 

ಮಿಶ್ರ ಏರ್ ಪಿಸ್ತೂಲ್ ವಿಭಾಗದಲ್ಲಿ ಮನು ಭಾಕರ್ ಮತ್ತು ರಷ್ಯಾದ ಶೂಟರ್‌ ಆರ್ಟೆಮ್ ಚೆರ್ನೊಸೊವ್ ಜೋಡಿ ಭಾರತದ ಸೌರಭ್ ಚೌಧರಿ ಮತ್ತು ಒಲಿಂಪಿಕ್ ಚಾಂಪಿಯನ್ ಅನಾ ಕೊರಕಾಯ್ ವಿರುದ್ಧ 17–13ರ ಗೆಲುವು ಸಾಧಿಸಿದರು.

10 ಮೀಟರ್ಸ್ ಏರ್ ರೈಫಲ್ ಮಿಶ್ರ ವಿಭಾಗದಲ್ಲಿ ದಿವ್ಯಾಂಶ್ ಪನ್ವರ್ ಮತ್ತು ಕ್ರೊವೇಷ್ಯಾದ ನೆಜಾನ ಪೆಜಿಕ್ ಜೋಡಿ 16–14ರಲ್ಲಿ ಭಾರತದ ಅ‍‍ಪೂರ್ವಿ ಚಾಂಡೆಲಾ ಮತ್ತು ಡಿ ಜಾಂಗ್ ವಿರುದ್ಧ ಗೆದ್ದರು. 10 ಮೀಟರ್ಸ್ ಏರ್ ಪಿಸ್ತೂಲ್ ಮಿಶ್ರ ತಂಡ ವಿಭಾಗದಲ್ಲಿ ಜಹಜಾರ್ ರಿಜ್ವಿ ಕಂಚಿನ ಪದಕಕ್ಕೆ ಕೊರಳೊಡ್ಡಿದರು.

ಮನು ಭಾಕರ್ ಮತ್ತು ದಿವ್ಯಾಂಶ್ 10 ಮೀಟರ್ಸ್ ಏರ್ ಪಿಸ್ತೂಲ್ ಮತ್ತು ರೈಫಲ್ ವಿಭಾಗದಲ್ಲಿ ಗುರುವಾರ ಪ್ರಶಸ್ತಿ ಗೆದ್ದಿದ್ದರು. ಈ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ಭಾರತ ಅಗ್ರ ಸ್ಥಾನ ಗಳಿಸಲು ನೆರವಾಗಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು