ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಮಹಿಳೆಯರಿಗೆ ಜಯ

‌ವೆಸ್ಟ್‌ ಇಂಡೀಸ್‌ ವಿರುದ್ಧದ ಟ್ವೆಂಟಿ–20 ಕ್ರಿಕೆಟ್
Last Updated 18 ನವೆಂಬರ್ 2019, 19:38 IST
ಅಕ್ಷರ ಗಾತ್ರ

ಪ್ರಾವಿಡೆನ್ಸ್‌, ಗಯಾನಾ: ಈಗಾಗಲೇ ಸರಣಿ ಗೆದ್ದುಕೊಂಡಿರುವ ಭಾರತ ಮಹಿಳಾ ತಂಡ, ಮಳೆಯಿಂದ ಓವರುಗಳ ಕಡಿತ ಕಂಡ ವೆಸ್ಟ್‌ ಇಂಡೀಸ್‌ ವಿರುದ್ಧದ ನಾಲ್ಕನೇ ಟಿ–20 ಪಂದ್ಯವನ್ನು ಕೂಡ ಭಾನುವಾರ ಐದು ರನ್‌ಗಳಿಂದ ಗೆದ್ದುಕೊಂಡಿತು. ಭಾರತದ ಸ್ಪಿನ್ನರ್‌ಗಳ ಉತ್ತಮ ಪ್ರದರ್ಶನ ಗೆಲುವಿಗೆ ನೆರವಾಯಿತು.

ಮಳೆಯಿಂದಾಗಿ ಪಂದ್ಯವನ್ನು ತಲಾ 9 ಓವರುಗಳಿಗೆ ಇಳಿಸಲಾಗಿತ್ತು. ಬ್ಯಾಟ್‌ ಮಾಡಲು ಕಳುಹಿಸಲ್ಪಟ್ಟ ಭಾರತ 9 ಓವರುಗಳಲ್ಲಿ 7 ವಿಕೆಟ್‌ಗೆ 50 ರನ್‌ ಗಳಿಸಿತು. ಪೂಜಾ ವಸ್ತ್ರಕರ್ ಬಿಟ್ಟರೆ ಉಳಿದವರು ಯಾರೂ ಎರಡಂಕೆ ಮೊತ್ತ ತಲುಪಲು ವಿಫಲರಾದರು. ಹೇಲಿ ಮ್ಯಾಥ್ಯೂಸ್‌ 13ಕ್ಕೆ 3 ವಿಕೆಟ್‌ ಪಡೆದರು.

ಆತಿಥೇಯ ತಂಡ ಸ್ಪಿನ್ನರ್‌ಗಳೆದುರು ಪರದಾಡಿ 9 ಓವರುಗಳಲ್ಲಿ 9 ವಿಕೆಟ್‌ಗೆ 45 ರನ್‌ ಗಳಿಸಲಷ್ಟೇ ಶಕ್ತವಾಯಿತು. ಅನುಜಾ ಪಾಟೀಲ (8ಕ್ಕೆ2), ದೀಪ್ತಿ ಶರ್ಮಾ (8ಕ್ಕೆ1) ಮತ್ತು ರಾಧಾ ಯಾದವ್ (8ಕ್ಕೆ1) ಎದುರಾಳಿಗಳನ್ನು ಅಂಕೆಯಲ್ಲಿಟ್ಟರು. ಆಲ್‌ರೌಂಡರ್‌ ಹೇಲಿ ಮ್ಯಾಥ್ಯೂಸ್‌ ಮತ್ತು ಚಿನೆಲಿ ಹೆಂಡ್ರಿ ತಲಾ 11 ರನ್‌ ಗಳಿಸಿದರು.

ಸ್ಕೋರುಗಳು: ಭಾರತ ಮಹಿಳಾ ತಂಡ: 9 ಓವರುಗಳಲ್ಲಿ7 ವಿಕೆಟ್‌ಗೆ 50 (ಪೂಜಾ ವಸ್ತ್ರಕರ್ 10; ಹೇಲಿ ಮ್ಯಾಥ್ಯೂಸ್‌ 13ಕ್ಕೆ3); ವೆಸ್ಟ್‌ ಇಂಡೀಸ್‌: 9 ಓವರುಗಳಲ್ಲಿ 9 ವಿಕಟ್‌ಗೆ 45 (ಹೇಲಿ ಮ್ಯಾಥ್ಯೂಸ್‌ 11; ಚಿನೆಲಿ ಹೆಂಡ್ರಿ 11; ಅನುಜಾ ಪಾಟೀಲ್‌ 8ಕ್ಕೆ2).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT