ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡಬ್ಲ್ಯುಎಫ್‌ ಜೂನಿಯರ್‌ ರ‍್ಯಾಂಕಿಂಗ್‌: ಅನುಪಮಾಗೆ ಅಗ್ರಸ್ಥಾನ

Last Updated 7 ಸೆಪ್ಟೆಂಬರ್ 2022, 12:22 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಭಾರತದ ಅನುಪಮಾ ಉಪಾಧ್ಯಾಯ ಅವರು ಬಿಡಬ್ಲ್ಯುಎಫ್‌ ಜೂನಿಯರ್ ಬ್ಯಾಡ್ಮಿಂಟನ್ ರ‍್ಯಾಂಕಿಂಗ್‌ನ 19 ವರ್ಷದೊಳಗಿನವರ ವಿಭಾಗದಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಇದರೊಂದಿಗೆ ಈ ಸಾಧನೆ ಮಾಡಿದ ದೇಶದ ಎರಡನೇ ಬ್ಯಾಡ್ಮಿಂಟನ್ ಆಟಗಾರ್ತಿ ಎನಿಸಿಕೊಂಡಿದ್ದಾರೆ.

ಪಂಚಕುಲದ, 17 ವರ್ಷದ ಅನುಪಮಾ, ಈ ವರ್ಷದ ಆರಂಭದಲ್ಲಿ ಉಗಾಂಡ ಮತ್ತು ಪೋಲೆಂಡ್‌ಗಳಲ್ಲಿ ನಡೆದ ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಪ್ರಶಸ್ತಿ ಜಯಿಸಿದ್ದರು.

ಅನುಪಮಾ ಅವರು ಬೆಂಗಳೂರಿನಲ್ಲಿರುವ ಪ್ರಕಾಶ್‌ ಪಡುಕೋಣೆಯ ಬ್ಯಾಡ್ಮಿಂಟನ್‌ ಅಕಾಡೆಮಿಯಲ್ಲಿ ತರಬೇತಿ ಪಡೆದವರು.

ಮಂಗಳವಾರ ಅವರು ಭಾರತದವರೇ ಆದ ತಸ್ನಿಂ ಮೀರ್‌ ಅವರನ್ನು ಹಿಂದಿಕ್ಕಿ ರ‍್ಯಾಂಕಿಂಗ್‌ನಲ್ಲಿಅನುಪಮಾ ಅಗ್ರಸ್ಥಾನ ಗಳಿಸಿದರು. ಅಗ್ರ 10ರಲ್ಲಿ ಭಾರತದ ಒಟ್ಟು ನಾಲ್ಕು ಆಟಗಾರ್ತಿಯರಿದ್ದಾರೆ. ತಸ್ನಿಂ (2ನೇ ಸ್ಥಾನ), ಅನ್ವೇಷಾ ಗೌಡ (6) ಮತ್ತು ಉನ್ನತಿ ಹೂಡಾ (9) ಇನ್ನುಳಿದವರು.

ಅನುಪಮಾ ಬಿಡಬ್ಲ್ಯುಎಫ್‌ ಜೂನಿಯರ್ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದಭಾರತದ ಒಟ್ಟಾರೆ ನಾಲ್ಕನೇ ಕ್ರೀಡಾಪಟುವಾಗಿದ್ದಾರೆ . ಬಾಲಕರ ವಿಭಾಗದಲ್ಲಿ ಆದಿತ್ಯ ಜೋಷಿ (2014), ಸಿರಿಲ್ ವರ್ಮಾ (2016), ಲಕ್ಷ್ಯ ಸೇನ್‌ (2017) ಮತ್ತು ಕಳೆದ ತಿಂಗಳು ಶಂಕರ್ ಸುಬ್ರಮಣ್ಯನ್‌ ಈ ಪಟ್ಟಕ್ಕೇರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT