ಶನಿವಾರ, ಮಾರ್ಚ್ 28, 2020
19 °C

ಐಒಎ ನಿಯೋಗದ ಟೋಕಿಯೊ ಪ್ರವಾಸ ಮುಂದಕ್ಕೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಟೋಕಿಯೊದಲ್ಲಿ ಭಾರತ ಕ್ರೀಡಾಪಟುಗಳಿಗೆ ಒದಗಿಸಲಾಗುವ ಸೌಲಭ್ಯಗಳ ಬಗ್ಗೆ ತಿಳಿದುಕೊಳ್ಳುವುದಕ್ಕಾಗಿ ತೆರಳಬೇಕಾಗಿದ್ದ ಭಾರತ ಒಲಿಂಪಿಕ್ ಸಂಸ್ಥೆಯ ನಿಯೋಗದ ಪ್ರವಾಸವನ್ನು ಮುಂದೂಡಲಾಗಿದೆ.

ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜುಜು ಅವರನ್ನು ಒಳಗೊಂಡ ನಿಯೋಗ ಮಾರ್ಚ್ 25ರಿಂದ 29ರ ವರೆಗೆ ಟೋಕಿಯೊಗೆ ತೆರಳುವ ಕಾರ್ಯಕ್ರಮವಿತ್ತು.

ಭಾರತ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷ ನರಿಂದರ್ ಬಾತ್ರಾ, ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ, ಬಾಕ್ಸಿಂಗ್ ಫೆಡರೇಷನ್ ಆಫ್ ಇಂಡಿಯಾದ ಅಧ್ಯಕ್ಷ ಅಜಯ್ ಸಿಂಗ್, ಕೇಂದ್ರ ಕ್ರೀಡಾ ಇಲಾಖೆಯ ಕಾರ್ಯದರ್ಶಿ ರಾಧೇಶ್ಯಾಮ್ ಜುಲಾನಿಯಾ, ಭಾರತ ಕ್ರೀಡಾ ಪ್ರಾಧಿಕಾರದ ನಿರ್ದೇಶಕ ಸಂದೀಪ್ ಪ್ರಧಾನ್ ಮುಂತಾದವರ ಹೆಸರು ಪಟ್ಟಿಯಲ್ಲಿತ್ತು. ಸದ್ಯ ಪ್ರವಾಸ ಕೈಗೊಳ್ಳದೇ ಇರಲು ಭಾನುವಾರ ನಿರ್ಧರಿಸಲಾಗಿದ್ದು ಹೊಸ ದಿನಾಂಕವನ್ನು ಮುಂದೆ ತಿಳಿಸಲಾಗುವುದು ಎಂದು ಹೇಳಲಾಗಿದೆ.

ಜುಲೈ 24ರಿಂದ ಆಗಸ್ಟ್ ಒಂಬತ್ತರ ವರೆಗೆ ಟೋಕಿಯೊ ಒಲಿಂಪಿಕ್ಸ್ ನಿಗದಿಯಾಗಿದೆ. ಭಾರತವು ಇದೇ ಮೊದಲ ಬಾರಿ ಒಲಿಂಪಿಕ್ಸ್ ನಡೆಯುವ ಜಾಗದಲ್ಲಿ ಆತಿಥಿ ಗೃಹ ಸ್ಥಾಪಿಸಲು ಮುಂದಾಗಿದೆ. 2,200 ಚದರ ಮೀಟರ್ ಸ್ಥಳದಲ್ಲಿ ಜೆಎಸ್‌ಡಬ್ಲ್ಯು ಈ ಸೌಲಭ್ಯವನ್ನು ಒದಗಿಸಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು