ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಕ್ಕಳ ಸಾಹಿತ್ಯ ಪ್ರತಿಭೆ ಬೆಳಕಿಗೆ ತನ್ನಿ’

ಮಕ್ಕಳ ಸಾಹಿತ್ಯ ಪರಿಷತ್‌ ಜಿಲ್ಲಾ ಅಧ್ಯಕ್ಷೆಯಾಗಿ ಪಾರ್ವತಿ ವಿ. ಸೋನಾರೆ ಆಯ್ಕೆ
Last Updated 31 ಮಾರ್ಚ್ 2018, 6:52 IST
ಅಕ್ಷರ ಗಾತ್ರ

ಬೀದರ್: ‘ಮಕ್ಕಳ ಸಾಹಿತ್ಯ ಪರಿಷತ್‌ ಮಕ್ಕಳಲ್ಲಿ ಅಡಗಿರುವ ಸಾಹಿತ್ಯ ಪ್ರತಿಭೆಯನ್ನು ಬೆಳಕಿಗೆ ತರಲು ಪ್ರಯತ್ನಿಸಬೇಕು’ ಎಂದು ಹಿರಿಯ ಸಾಹಿತಿ ಚಂದ್ರಪ್ಪ ಹೆಬ್ಬಾಳಕರ್ ಸಲಹೆ ನೀಡಿದರು.ನಗರದ ಕೃಷ್ಣ ರಿಜೆನ್ಸಿ ಹೋಟೆಲ್‌ ಸಭಾಂಗಣದಲ್ಲಿ ಶುಕ್ರವಾರ ನಡೆದ ಮಕ್ಕಳ ಸಾಹಿತ್ಯ ಪರಿಷತ್‌ ಜಿಲ್ಲಾ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘25 ವರ್ಷಗಳ ಹಿಂದೆಯೇ ಮಕ್ಕಳ ಸಾಹಿತ್ಯ ಪರಿಷತ್‌ ಸ್ಥಾಪನೆಯಾಗಿದೆ. ಮಕ್ಕಳ ಸಾಹಿತ್ಯ ಪರಿಷತ್‌ನ ಒತ್ತಾಯದ ಮೇರೆಗೆ ರಾಜ್ಯ ಸರ್ಕಾರ ಬಾಲ ವಿಕಾಸ ಅಕಾಡೆಮಿಯನ್ನು ಸ್ಥಾಪಿಸಿ ಅದರ ಮೂಲಕ ಸಾಹಿತ್ಯದತ್ತ ಮಕ್ಕಳ ಒಲವು ಹೆಚ್ಚಿಸಲು ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದೆ’ ಎಂದರು.

ಸಾಹಿತಿ ಚಂದ್ರಗುಪ್ತ ಚಾಂದಕವಠೆ ಮಾತನಾಡಿ, ‘ಹತ್ತು ವರ್ಷಗಳಿಂದ ಕನ್ನಡ ಸಾಹಿತ್ಯ ಪರಿಷತ್‌ ಮಕ್ಕಳಿಗಾಗಿ ಹಲವು ವಿನೂತನ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ. ಮಕ್ಕಳ ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಮಿತಿ ಮಕ್ಕಳನ್ನು ಸಾಹಿತ್ಯದತ್ತ ಆಕರ್ಷಿಸುವ ದಿಸೆಯಲ್ಲಿ ಕಾರ್ಯ ನಿರ್ವಹಿಸಬೇಕಿದೆ’ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್‌ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್. ಮನೋಹರ ಮಾತನಾಡಿ, ‘ಪ್ರಸ್ತುತ ಮಾನವನ ಜೀವನ ಯಾಂತ್ರಿಕವಾಗಿದೆ. ಮನೆಗಳು ಮಕ್ಕಳಿಗೆ ಜೈಲುಗಳಂತಾಗಿವೆ. ಪಾಲಕರು ಜೇಲರ್‌ಗಳಂತೆ ಆಗಿದ್ದಾರೆ. ಇದನ್ನು ತಪ್ಪಿಸಬೇಕು. ಸಾಹಿತ್ಯದ ಪುಸ್ತಕ ಓದಲು ಮಕ್ಕಳನ್ನು ಪ್ರೋತ್ಸಾಹಿಸಬೇಕು’ ಎಂದರು.

ಮಕ್ಕಳ ಸಾಹಿತ್ಯ ಪರಿಷತ್‌ ಜಿಲ್ಲಾ ಸಮಿತಿಯ ಅಧ್ಯಕ್ಷೆ ಪಾರ್ವತಿ ವಿ. ಸೋನಾರೆ ಮಾತನಾಡಿ, ‘ಮಕ್ಕಳನ್ನು ಸಾಹಿತ್ಯದತ್ತ ಸೆಳೆಯುವುದು ಮಕ್ಕಳ ಸಾಹಿತ್ಯ ಪರಿಷತ್ತಿನ ಮುಖ್ಯ ಉದ್ದೇಶವಾಗಿದೆ’ ಎಂದು ತಿಳಿಸಿದರು.

ಸಾಹಿತಿಗಳಾದ ಎಂ.ಜಿ. ದೇಶಪಾಂಡೆ, ರಜಿಯಾ ಬಳಬಟ್ಟಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಜಿಲ್ಲಾ ಅನುಷ್ಠಾನ ಸಮಿತಿ ಸದಸ್ಯ ಸಂಜೀವಕುಮಾರ ಅತಿವಾಳೆ, ಪ್ರಮುಖರಾದ ಶಿವಕುಮಾರ ಕಟ್ಟೆ ಇದ್ದರು. ಮಹೇಶ ಗೋರನಾಳಕರ್ ಸ್ವಾಗತಿಸಿದರು. ವಿಜಯಕುಮಾರ ಸೋನಾರೆ ವಂದಿಸಿದರು.

ಪದಾಧಿಕಾರಿಗಳ ಆಯ್ಕೆ: ಸಭೆಯಲ್ಲಿ ಮಕ್ಕಳ ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಮಿತಿಯ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ವಿವರ: ಪಾರ್ವತಿ ವಿಜಯಕುಮಾರ ಸೋನಾರೆ (ಅಧ್ಯಕ್ಷೆ), ಸತ್ಯಮ್ಮ ವಿಶ್ವಕರ್ಮ, ಸೈಯ್ಯದ್ ಮೊಹಮ್ಮದ್‌ ಗೌಸ್ ಖಾದ್ರಿ, ಸುಮತಿ ಕುದರೆ (ಉಪಾಧ್ಯಕ್ಷರು), ಮಾಣಿಕರಾವ್‌ ಪವಾರ, ಮಹಾರುದ್ರ ಡಾಕುಳಗಿ, ಕಿಚ್ಚ ಮಹೇಶ, ಪ್ರವೀಣಕುಮಾರ ಗಾಯಕವಾಡ, ಕುಪೇಂದ್ರ ರಾಜಗೀರಾ (ಪ್ರಧಾನ ಕಾರ್ಯದರ್ಶಿಗಳು) , ಈಶ್ವರ ತಡೋಳಾ, ಪುಷ್ಪ ಕನಕ, ಮಕ್ಸೂದ್‌ ಅಲಿ, ಓಂಕಾರ ಪಾಟೀಲ, ಅಂಬಾಜಿ ಕೊಟಗ್ಯಾಳೆ, ವಿಜಯಕುಮಾರ
ಗೌರೆ (ಸಂಘಟನಾ ಕಾರ್ಯದರ್ಶಿಗಳು), ರಜಿಯಾ ಬಳಬಟ್ಟಿ (ಕೋಶಾಧ್ಯಕ್ಷೆ), ಚನ್ನಬಸವ ಚಿಕ್ಲೆ, ಅವಿನಾಶ ಸೋನೆ, ಕವಿತಾ ಭುಜಂಗೆ, ಸುನೀತಾ ಬಿರಾದಾರ, ಇಂದುಮತಿ, ಶ್ರೀದೇವಿ ಹೂಗಾರ (ಸದಸ್ಯರು). ರಾಮದಾಸ ಬಿರಾದಾರ ಕಾಶೆಂಪುರೆ (ಔರಾದ್‌ ತಾಲ್ಲೂಕು ಘಟಕದ ಅಧ್ಯಕ್ಷ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT