ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲ್ಲೇಶ್ವರಂ ಕಪ್‌ ಬ್ಯಾಸ್ಕೆಟ್‌ಬಾಲ್‌: ಫೈನಲ್‌ಗೆ ಜೈನ್ – ಸುರಾನ ಕಾಲೆಜು

ಮಹಿಳೆಯರ ವಿಭಾಗದಲ್ಲಿ ಎಸ್‌ಜೆಸಿಸಿ, ಜೈನ್ ಕಾಲೇಜು ಹಣಾಹಣಿ
Last Updated 2 ಫೆಬ್ರುವರಿ 2019, 20:26 IST
ಅಕ್ಷರ ಗಾತ್ರ

ಬೆಂಗಳೂರು: ಜೈನ್ ವಿವಿಯ ಪುರುಷ ಮತ್ತು ಮಹಿಳೆಯರ ತಂಡಗಳು ಇಲ್ಲಿ ನಡೆಯುತ್ತಿರುವ ಮಲ್ಲೇಶ್ವರಂ ಕಪ್‌ ಅಂತರ ಕಾಲೇಜು ರಾಜ್ಯಮಟ್ಟದ ಬ್ಯಾಸ್ಕೆಟ್‌ಬಾಲ್ ಟೂರ್ನಿಯ ಫೈನಲ್‌ಗೆ ಲಗ್ಗೆ ಇರಿಸಿದವು.

ಪುರುಷರ ವಿಭಾಗದಲ್ಲಿ ಸುರಾನ ಮತ್ತು ಮಹಿಳೆಯರ ವಿಭಾಗದಲ್ಲಿ ಸೇಂಟ್ ಜೋಸೆಫ್ಸ್‌ ಕಾಲೇಜ್‌ ಆಫ್ ಕಾಮರ್ಸ್‌ (ಎಸ್‌ಜೆಸಿಸಿ) ತಂಡಗಳು ಕೂಡ ಪ್ರಶಸ್ತಿ ಸುತ್ತಿನಲ್ಲಿ ಆಡಲಿವೆ.

ಬೀಗಲ್ಸ್‌ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪುರುಷರ ಸೆಮಿಫೈನಲ್‌ನಲ್ಲಿ ಜೈನ್ ವಿವಿ, ಎಂಎಸ್‌ಆರ್‌ಐಟಿಯನ್ನು 78–57ರಲ್ಲಿ ಮಣಿಸಿತು. ಜೈನ್ ವಿವಿ ಪರ ಅಭಿಷೇಕ್‌ 37 ಮತ್ತು ನಿಖಿಲ್‌ 12 ಪಾಯಿಂಟ್ ಗಳಿಸಿದರು. ಎದುರಾಳಿ ತಂಡಕ್ಕೆ ಗೌತಮ್‌ 16 ಮತ್ತು ದೇವ್‌ 12 ಪಾಯಿಂಟ್ ಗಳಿಸಿಕೊಟ್ಟರು.

ಮತ್ತೊಂದು ಪಂದ್ಯದಲ್ಲಿ ಅಕ್ಷಯ್‌ ಮತ್ತು ಕಾರ್ತಿಕ್ ಬಾಲಾಜಿ ಅವರ ಅಮೋಘ ಆಟದ ನೆರವಿನಿಂದ ಸುರಾನ ಕಾಲೇಜು ಎಸ್‌ಜೆಸಿಸಿಯನ್ನು 63–60ರಿಂದ ಮಣಿಸಿತು. ಅಕ್ಷಯ್‌ ಮತ್ತು ಕಾರ್ತಿಕ್ ಕ್ರಮವಾಗಿ 22 ಹಾಗೂ 20 ಪಾಯಿಂಟ್ ಗಳಿಸಿದರು. ಹೋರಾಡಿ ಸೋತ ಎಸ್‌ಜೆಸಿಸಿಗೆ ರಾಜೇಶ್ವರ್‌ 17 ಮತ್ತು ಸತ್ಯ 13 ಪಾಯಿಂಟ್ ಗಳಿಸಿಕೊಟ್ಟರು.

ಕೋನಿಕಾ ಆಟ ವ್ಯರ್ಥ: ಮಹಿಳೆಯರ ಸೆಮಿಫೈನಲ್‌ನಲ್ಲಿ ಕೋನಿಕಾ ಉತ್ತಮ ಆಟವಾಡಿ ಗಮನ ಸೆಳೆದರು. ಆದರೆ ಅವರು ಪ್ರತಿನಿಧಿಸಿದ್ದ ನ್ಯೂ ಹೊರೈಜನ್‌ ಎಂಜಿನಿಯರಿಂಗ್‌ ಕಾಲೇಜು ಜಯ ಗಳಿಸಲು ವಿಫಲವಾಯಿತು. ಮಧುರವಾಣಿ ಅವರ 11 ಪಾಯಿಂಟ್‌ಗಳ ಬಲದಿಂದ ಜೈನ್ ವಿವಿ 51–27ರಿಂದ ಹೊರೈಜನ್ ಎದುರು ಗೆದ್ದಿತು.

ನಾಲ್ಕರ ಘಟ್ಟದ ಮತ್ತೊಂದು ಪಂದ್ಯದಲ್ಲಿ ಎಸ್‌ಜೆಸಿಸಿ ತಂಡ ಮಂಗಳೂರಿನ ನಿಟ್ಟೆ ತಂಡವನ್ನು 69–34ರಿಂದ ಸೋಲಿಸಿತು. ಎಸ್‌ಜೆಸಿಸಿಗೆ ಲೋಪಮುದ್ರ 22 ಮತ್ತು ಚಂದನ 19 ಪಾಯಿಂಟ್ ತಂದುಕೊಟ್ಟರೆ ನಿಟ್ಟೆ ಪರ ಕೀರ್ತನ 20 ಪಾಯಿಂಟ್ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT