ಸೋಮವಾರ, ಜನವರಿ 20, 2020
19 °C

ಕಾರ್ಟಿಂಗ್‌: ಕಾರ್ತಿಕ್‌ಗೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಮೋಘ ಸಾಮರ್ಥ್ಯ ತೋರಿದ ಬೆಂಗಳೂರಿನ ಕಾರ್ತಿಕ್‌ ಮುತ್ತುಸಾಮಿ ಅವರು ಚೆನ್ನೈಯಲ್ಲಿ ನಡೆದ ಜೆ.ಕೆ.ಟಯರ್‌ ಎಫ್‌ಎಂಎಸ್‌ಸಿಐ ರಾಷ್ಟ್ರೀಯ ಕಾರ್ಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದಿದ್ದಾರೆ.

ಇ.ಸಿ.ಆರ್‌. ಸ್ಪೀಡ್‌ವೇ ಟ್ರ್ಯಾಕ್‌ನಲ್ಲಿ ನಡೆದ ಸೋದಿ ಕಾರ್ಟ್‌–4 ಸ್ಟ್ರೋಕ್‌ ಸೀನಿಯರ್‌ ಕ್ಲಾಸ್‌ ಚಾಂಪಿಯನ್‌ ವಿಭಾಗದಲ್ಲಿ ಪಾಲ್ಗೊಂಡಿದ್ದ ಕಾರ್ತಿಕ್‌, 12 ಲ್ಯಾಪ್‌ಗಳ ಸ್ಪರ್ಧೆಯನ್ನು 4 ನಿಮಿಷ 25.610 ಸೆಕೆಂಡುಗಳಲ್ಲಿ ಪೂರೈಸಿದರು.

ಕೊಚ್ಚಿಯ ಮೊಹಮ್ಮದ್‌ ರಿದಾಫ್‌ (4:27.534ಸೆ.) ಮತ್ತು ಲಖನೌದ ಪ್ರಥಮ್‌ ಕುಮಾರ್‌ (4:30.051ಸೆ.) ಅವರು ಕ್ರಮವಾಗಿ ಎರಡು ಮತ್ತು ಮೂರನೇಯವರಾಗಿ ಗುರಿ ಕ್ರಮಿಸಿದರು.

ಸೋದಿ ಕಾರ್ಟ್‌–4 ಸ್ಟ್ರೋಕ್‌ ಜೂನಿಯರ್‌ ಕ್ಲಾಸ್‌ ಚಾಂಪಿಯನ್‌ ವಿಭಾಗದ ಪ್ರಶಸ್ತಿ ಹೈದರಾಬಾದ್‌ನ ಆದಿತ್ಯ ರಾಜಾ ಪಾಲಾಯಿತು. ಆದಿತ್ಯ, 4 ನಿಮಿಷ 31.965 ಸೆಕೆಂಡುಗಳಲ್ಲಿ ಗುರಿ ತಲುಪಿದರು.

ದೆಹಲಿಯ ಜಸ್ಮೆಹರ್‌ ಜುಬ್ಬಾಲ್‌ (4:33.074ಸೆ.) ಎರಡನೇ ಸ್ಥಾನ ಪಡೆದರೆ, ಮುಸ್ಕಾನ್‌ ಜುಬ್ಬಾಲ್‌ (4:38.149ಸೆ.) ಮೂರನೇ ಸ್ಥಾನದೊಂದಿಗೆ ಸ್ಪರ್ಧೆ ಮುಗಿಸಿದರು.

ಜೆ.ಕೆ.ಟಯರ್‌–4 ಸ್ಟ್ರೋಕ್‌ ಮಹಿಳಾ ಕ್ಲಾಸ್‌ ಓಪನ್‌ ವಿಭಾಗದಲ್ಲಿ ಕೋಯಮತ್ತೂರಿನ ತಪಸ್ಯಾ ಸುದರ್ಶನ್‌ ಚಾಂಪಿಯನ್‌ ಆದರು. ಅವರು ಸ್ಪರ್ಧೆ ಪೂರ್ಣಗೊಳಿಸಲು 4 ನಿಮಿಷ 40.180 ಸೆಕೆಂಡುಗಳನ್ನು ತೆಗೆದುಕೊಂಡರು.

ಮುಂಬೈನ ಆಶಿ ಹನ್ಸ್‌ಪಾಲ್‌ (4:49.550ಸೆ.) ಮತ್ತು ಅಹಮದಾಬಾದ್‌ನ ಇಶಾ ಶರ್ಮಾ (4:50.060ಸೆ.) ಅವರು ಕ್ರಮವಾಗಿ ಎರಡು ಮತ್ತು ಮೂರನೇಯವರಾಗಿ ಗುರಿ ಸೇರಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು